ಹಾವೇರಿ: ರಾಜ್ಯದಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ನಿರಂತರ ವರ್ಷಧಾರೆಯಿಂದಾಗಿ ಸರಣಿ ಅವಘಡಗಳು ಸಂಭವಿಸುತ್ತಲೇ ಇವೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆಯೊಂದರ ಮೇಲ್ಚಾವಣಿ ಕುಸಿದು ಮೂವರು ಸಾವನ್ನಪ್ಪಿದ್ದಾರೆ.
ನಿರಂತರ ಮಳೆಯಿಂದಾಗಿ ಮನೆ ಸೋರುತ್ತಿತ್ತು ಶುಕ್ರವಾರ ಬೆಳಗ್ಗೆ ಮನೆಯ ಗೋಡೆ ಕುಸಿದು ಘೋರ ಅವಘಡ ಸಂಭವಿಸಿದೆ. ಮೃತರನ್ನು 30 ವರ್ಷ ವಯಸ್ಸಿನ ಚೆನ್ನಮ್ಮ ಹರಕುಣಿ ಹಾಗೂ ಆಕೆಯ ಆಕೆಯ ಅವಳಿ ಮಕ್ಕಳಾದ ಎರಡು ವರ್ಷದ ಅಮೂಲ್ಯ ಮತ್ತು ಅನನ್ಯ ಸಾವನ್ನಪ್ಪಿದ್ದಾರೆ. 70 ವರ್ಷದ ಯಲ್ಲಮ್ಮ ಮುತ್ತಣ್ಣ ಹರಕುಣಿ ಮತ್ತು 35 ವರ್ಷದ ಸುನೀತಾ ಎಂಬವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.