ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದಾವೋಸ್‍ಗೆ ಭೇಟಿ ನೀಡಿ ಇದೀಗ ರಾಜ್ಯಕ್ಕೆ ಇಂದು ಮತ್ತೆ ವಾಪಸ್ಸಾಗಲಿದ್ದಾರೆ. ಇನ್ನು ಹೈಕಮಾಂಡ್ ಮಹತ್ವದ ಸೂಚನೆಯನ್ನು ಬಿಎಸ್‍ವೈ ಗೆ ನೀಡಿದ್ದು ಇದೀಗ ಮಾಹಿತಿ ಹೊರ ಬಿದ್ದಿದೆ. ಸಂಪುಟ ವಿಸ್ತರಣೆ ಬಗ್ಗೆ ಹಲವು ಊಹಪೋಹಗಳಿದ್ದು;ಮತ್ತೆ ಚರ್ಚೆ ಆರಂಭವಾಗಿದೆ.
ಬಿಜೆಪಿಯಲ್ಲಿ ಈಗಾಗಲೇ 24 ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ . ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಜೆ.ಪಿ ನಡ್ಡಾ ವಹಸಿದ್ದು ;ಹೈಕಮಾಂಡ್ ನಿರ್ದೇಶನದಲ್ಲಿ ಮಾತ್ರ ಕೊಂಚ ವಿಭಿನ್ನತೆ ಇದೆ. ಕಾಂಗ್ರೆಸ್ ಮತ್ತೆ ಜೆಡಿಎಸ್‍ನಿಂದ ಬಂದು ಶಾಸಕರಾಗಿರುವವರ ಪೈಕಿಯಲ್ಲಿ 6 ಶಾಸಕರಿಗೆ ಮಾತ್ರ ಸಚಿವ ಸ್ಥಾನವನ್ನು ನೀಡಲು ಸೂಚನೆ ನೀಡಿದ್ದು , ಉಳಿದಂತೆ ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡಲು ತೀರ್ಮಾನಿಸಲಾಗಿದೆ.