ಬೆಂಗಳೂರು: ಟನಲ್ ವಿಚಾರದಲ್ಲಿ ಬಿಜೆಪಿಯದ್ದು ಪರಿಸರ ಕಾಳಜಿಯೋ ಅಥವಾ ರಾಜಕೀಯವೋ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಶಿರಾಡಿ ಘಾಟ್‌ಗೆ ಒಪ್ಪಿಗೆ ಸೂಚಿಸಿರುವ ಬಿಜೆಪಿ ನಾಯಕರು, ಬೆಂಗಳೂರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಲೋಕಕ್ಕೆ ತಿಳಿಯುವುದಿಲ್ಲ ಎಂದು ಭಾವಿಸುವಂತೆ, ಬಿಜೆಪಿಗರು ತಮ್ಮ ನಾಟಕ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿದ್ದಾರೆ’ ಎಂದು ವ್ಯಂಗ್ಯವಾಡಿದೆ.
‘ಬೆಂಗಳೂರಿನಲ್ಲಿ ಉದ್ದೇಶಿತ ಟನಲ್ ರಸ್ತೆ ಯೋಜನೆಯಿಂದ ಪರಿಸರ ಸರ್ವನಾಶವಾಗಿಬಿಡುತ್ತದೆ ಎಂಬಂತೆ ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ಹೆದ್ದಾರಿ ಸಚಿವರಾದ ನಿತೀನ್ ಗಡ್ಕರಿ ಅವರು ಯುನೆಸ್ಕೋ ಮಾನ್ಯತೆ ಪಡೆದಿರುವ ಪಶ್ಚಿಮ ಘಟ್ಟಗಳಾದ ಶಿರಾಡಿ ಘಾಟ್ ನಲ್ಲಿ ಟನಲ್ ಕೊರೆಯಲು ಅನುಮತಿ ನೀಡಿದ್ದಾರೆ. ಇದರ ಬಗ್ಗೆ ಬಿಜೆಪಿಯ ಬೃಹಸ್ಪತಿಗಳು ಯಾಕೆ ಉಸಿರು ಬಿಡುತ್ತಿಲ್ಲ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಬಿಜೆಪಿಯವರು ಶಿರಾಡಿ ಘಾಟ್ ನಲ್ಲಿ ಟನಲ್ ಕೊರೆದರೆ ಪ್ರಕೃತಿ ಉದ್ಧಾರವಾಗುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಸುರಂಗ ಕೊರೆದರೆ ಅದು ಪ್ರಕೃತಿಗೆ ಧಕ್ಕೆಯಾಗುತ್ತದೆ’ ಎಂದು ಕಾಂಗ್ರೆಸ್ ಪಕ್ಷ ತನ್ನ ‘X’ ಖಾತೆಯಲ್ಲಿ ಬರೆದುಕೊಂಡಿದೆ.
ಶಿರಾಡಿ ಘಾಟ್‌ಗೆ ಒಪ್ಪಿಗೆ, ಬೆಂಗಳೂರಿಗೆ ವಿರೋಧ!
ಟನಲ್ ವಿಚಾರದಲ್ಲಿ ಬಿಜೆಪಿಯದ್ದು ಪರಿಸರ ಕಾಳಜಿಯೋ ಅಥವಾ ರಾಜಕೀಯವೋ?ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಲೋಕಕ್ಕೆ ತಿಳಿಯುವುದಿಲ್ಲ ಎಂದು ಭಾವಿಸುವಂತೆ, ಬಿಜೆಪಿಗರು ತಮ್ಮ ನಾಟಕ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿದ್ದಾರೆ.
ಬೆಂಗಳೂರಿನಲ್ಲಿ ಉದ್ದೇಶಿತ ಟನಲ್ ರಸ್ತೆ ಯೋಜನೆಯಿಂದ… pic.twitter.com/f3KM0z5hih
— Karnataka Congress (@INCKarnataka) November 15, 2025























































