ಬೆಂಗಳೂರು: ರಾಜ್ಯದ ಸಿಎಂ ಒಬ್ಬರು ಒಂದೇ ವರ್ಷದ ಅವಧಿಯಲ್ಲಿ 12 ಬಾರಿ ದೆಹಲಿ ‘ದಂಡ’ಯಾತ್ರೆ ಮಾಡಿದ್ದು ಇತಿಹಾಸದಲ್ಲೇ ಮೊದಲು, ಈ ಅಮೋಘ ದಾಖಲೆಯನ್ನು ಬಸವರಾಜ್ ಬೊಮ್ಮಾಯಿ ಅವರು ನಿರ್ಮಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ರಾಜ್ಯದ ಜನರ ಅಭಿಪ್ರಾಯಕ್ಕಿಂತ ದೆಹಲಿ ಹೈಕಮಾಂಡ್ ಅದೇಶವೇ ಮುಖ್ಯ. ಕುರ್ಚಿ ಭದ್ರತೆಗಾಗಿ ಈ ಪರಿ ಹೈಕಮಾಂಡ್ ದಾಸ್ಯಕ್ಕೆ ಒಳಗಾಗಿದ್ದು ದುರಂತ ಎಂದಿದೆ.
ಸಿಎಂ ಅವರು ದೇಹಲಿಯಲ್ಲೇ ಒಂದು ಕಚೇರಿ ತೆರೆದು ಕೂರುವುದೊಳಿತು, ಅವರಿಗೆ ರಾಜ್ಯಕ್ಕಿಂತ ದೇಹಲಿಯಲ್ಲೇ ಹೆಚ್ಚು ಕೆಲಸವಿರುವಂತಿದೆ ಎಂದು ವ್ಯಂಗ್ಯವಾಡಿರುವ ಕಾಂಗ್ರೆಸ್, ಈ ಬಾರಿಯಾದರೂ ನೆರೆ ಪರಿಹಾರ, GST ಬಾಕಿ, ವಸತಿ, ನೀರಾವರಿ ಯೋಜನೆಗಳಿಗೆ ಅನುಮೋದನೆ ತರುವಿರಾ ಅಥವಾ ಬಿಜೆಪಿಯೊಳಗಿನ ಕಿತ್ತಾಟ ಬಗೆಹರಿಸುವುದರಲ್ಲೇ ಪ್ರವಾಸ ಮುಗಿಸುವಿರಾ? ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದೆ.
ಸಿಎಂ #BombeBommai ಅವರು ದೇಹಲಿಯಲ್ಲೇ ಒಂದು ಕಚೇರಿ ತೆರೆದು ಕೂರುವುದೊಳಿತು,
ಅವರಿಗೆ ರಾಜ್ಯಕ್ಕಿಂತ ದೇಹಲಿಯಲ್ಲೇ ಹೆಚ್ಚು ಕೆಲಸವಿರುವಂತಿದೆ!@BSBommai ಅವರೇ, ಈ ಬಾರಿಯಾದರೂ ನೆರೆ ಪರಿಹಾರ, GST ಬಾಕಿ, ವಸತಿ, ನೀರಾವರಿ ಯೋಜನೆಗಳಿಗೆ ಅನುಮೋದನೆ ತರುವಿರಾ ಅಥವಾ #BJPvsBJP ಕಿತ್ತಾಟ ಬಗೆಹರಿಸುವುದರಲ್ಲೇ ಪ್ರವಾಸ ಮುಗಿಸುವಿರಾ?— Karnataka Congress (@INCKarnataka) July 25, 2022
;





















































