ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ ವರದಿಯನ್ನು ರಾಜ್ಯಸಭೆಯಲ್ಲಿ ಇಂದು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ-ಪ್ರತಿಪಕ್ಷಗಳ ನಡುವೆ ಗದ್ದಲ ಕೋಲಾಹಲ ಏರ್ಪಟ್ಟು ಸದನವನ್ನು ಮುಂದೂಡಲಾಯಿತು.
ಜೆಪಿಸಿ ಸದಸ್ಯರಾದ ಬಿಜೆಪಿ ಸಂಸದೆ ಮೇಧಾ ವಿಶ್ರಮ್ ಕುಲಕರ್ಣಿ ಅವರು ಇಂದು ವರದಿಯನ್ನು ಮಂಡಿಸಿದರು. ಜೆಪಿಸಿ ವರದಿ ಮಂಡನೆಯಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಗದ್ದಲ ಕೋಲಾಹಲದ ನಡುವೆ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದವು.
ಈ ವೇಳೆ ಸದಸ್ಯರನ್ನು ಸಮಾಧಾನ ಪಡಿಸಲೆತ್ತನಿಸಿದ ಸಭಾಧ್ಯಕ್ಷ ಜಗದೀಪ್ ಧಂಖರ್ ಅವರು, ರಾಷ್ಟ್ರಪತಿಗಳಿಗೆ ಅಗೌರವ ತೋರಿಸುವಂತಹಾ ನಡೆ ಸರಿಯಲ್ಲ ಎಂದರಲ್ಲದೆ, ಸದಸ್ಉರನ್ನು ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಬೇಕು ಎಂದು ಮನವಿ ಮಾಡಿದರು. ಆದರೆ ವಿರೋಧ ಪಕ್ಷಗಳ ಸಂಸದರು ಒಪ್ಪಲಿಲ್ಲ. ಈ ಗದ್ದಲದ ನಡುವೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.