ಬೆಂಗಳೂರು: ಲೋಕಸಭೆಯಲ್ಲಿ ತಾನು ಸ್ಪರ್ಧಿಸಿದರೆ ಮಂಡ್ಯ ಕ್ಷೇತ್ರದಿಂದ ಮಾತ್ರ ಎಂದು ಸಂಸದೆ ಸುಮಲತಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಿ ಬೆಂಗಳೂರಿಗೆ ವಾಪಸಾದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದರು.
ನಾನು ರಾಜಕೀಯ ಮಾಡಿದ್ರೆ ಮಂಡ್ಯದಿಂದಲೇ ಮಾಡ್ತೀನಿ ಎಂದವರು ಹೇಳಿದರು. ಚಿಕ್ಕಬಳ್ಳಾಪುರ ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಹಲವರು ಸಲಹೆ ಮಾಡದ್ದಾರೆ. ಆದರೆ ನನ್ನ ನಿಲುವನ್ನು ಬಿಜೆಪಿ ವರಿಷ್ಠರ ಮುಂದೆ ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯಲ್ಲಿಯೇ ಇರಬೇಕು ಎಂದು ನಾಯಕರು ತಿಳಿಸಿದ್ದು ಪಾಸಿಟಿವ್ ಆಗಿ ರಿಸಲ್ಟ್ ಬರುತ್ತೆ ಅನ್ನೂ ವಿಶ್ವಾಸವಿದೆ ಎಂದು ಸುಮಲತಾ ಹೇಳಿದರು.

































































