ಬೆಂಗಳೂರು: ಹಿರಿಯ ಉದ್ಯಮಿ, ಉದಯವಾಣಿ ದಿನಪತ್ರಿಕೆಯ ಸಂಸ್ಥಾಕರು ಆಗಿದ್ದ ಟಿ. ಮೋಹನದಾಸ್ ಪೈ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೋಹನದಾಸ ಪೈ ಅವರು ನಿಧನ ಹೊಂದಿದ್ದಾರೆ ಎನ್ನುವ ವಿಷಯ ನನಗೆ ಆಘಾತ ಉಂಟು ಮಾಡಿದೆ. ಹಿರಿಯ ಚೇತನರು, ಎಲ್ಲರ ಮಾರ್ಗದರ್ಶಕರಂತಿದ್ದ ಟಿ. ಮೋಹನ್ ದಾಸ್ ಪೈ ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ದವರಿಗೆ ಪೈ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಸಿಎಂ ಕೋರಿದ್ದಾರೆ.
“ಉದಯವಾಣಿ” ದಿನಪತ್ರಿಕೆಯ ಸಂಸ್ಥಾಪಕ ಮೋಹನದಾಸ್ ಪೈ ನಿಧನಕ್ಕೆ ನಳಿನ್‍ಕುಮಾರ್ ಕೂಡಾ ಕಟೀಲ್ ಸಂತಾಪ ಸೂಚಿಸಿದ್ದಾರೆ. ಮೋಹನದಾಸ ಪೈ ಅವರು ನಿಧನ ಹೊಂದಿದ್ದಾರೆ ಎನ್ನುವ ವಿಷಯ ನನಗೆ ಅತ್ಯಂತ ನೋವು ತಂದಿದೆ. ಮಣಿಪಾಲದ ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಹಿರಿಯ ಚೇತನರಾದ ಟಿ.ಮೋಹನದಾಸ್ ಪೈ ಅವರು, ಸದಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದರು ಎಂದು ನಳಿನ್ ಕುಮಾರ್ ನೆನಪಿಸಿದ್ದಾರೆ.
ಟಿ. ಮೋಹನದಾಸ್ ಪೈ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕಂಬನಿ ಮಂಡಿದಿದ್ದಾರೆ. ಟ್ವೀಟ್ ಮಾಡಿರುವ ಅವರು, ಉದಯವಾಣಿ ಪತ್ರಿಕೆಯ ಸಂಸ್ಥಾಪಕರು, ಹಿರಿಯ ಉದ್ಯಮಿ, ಹಲವು ಸಂಘ – ಸಂಸ್ಥೆಗಳ ಮುಂಚೂಣಿಯಲ್ಲಿ ನಿಂತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಟಿ.ಮೋಹನದಾಸ ಪೈ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ದುಃಖತಪ್ತ ಕುಟುಂಬವರ್ಗಕ್ಕೆ ಸಂತಾಪಗಳು ಎಂದಿದ್ದಾರೆ
ಉದಯವಾಣಿ ಪತ್ರಿಕೆಯ ಸಂಸ್ಥಾಪಕರು, ಹಿರಿಯ ಉದ್ಯಮಿ, ಹಲವು ಸಂಘ – ಸಂಸ್ಥೆಗಳ ಮುಂಚೂಣಿಯಲ್ಲಿ ನಿಂತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಟಿ.ಮೋಹನದಾಸ ಪೈ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಅವರ ದುಃಖತಪ್ತ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು. pic.twitter.com/kNXB3uUwFE
— Siddaramaiah (@siddaramaiah) July 31, 2022
;




















































