ಮೈಸೂರು ಪಾಲಿಕೆ ಚುನಾವಣೆ ಇಂದು ಜರುಗಿದ್ದು , ಇದೀಗ ಫಲಿತಾಂಶ ಹೊರ ಬಿದ್ದಿದೆ. ಇದೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರು ಮೇಯರ್ ಕುರ್ಚಿಯನ್ನು ಅಲಂಕರಿಸಿದ್ದಾರೆ .ಇನ್ಮುಂದೆ ಮುಸ್ಲಿಂ ಮಹಿಳಾ ಮೇಯರ್ ಆಗಿ ತಸ್ನೀಮ್ ಅಧಿಕಾರ ನಡೆಸಲಿದ್ದಾರೆ. ಗೀತಾ ಯೋಗಾನಂದ್ ವಿರುದ್ಧ 47 ಮತಗಳಿಂದ ಜೆಡಿಎಸ್‍ನ ತಸ್ನೀಮ್ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಇನ್ನು ಉಪಮೇಯರ್ ಆಗಿ ಶಾಂತಮ್ಮ ವಿರುದ್ಧ ಶ್ರೀಧರ್ 47 ಮತಗಳಿಂದ ಆಯ್ಕೆಯಾಗಿದ್ದಾರೆ.ಇನ್ನುಳಿದಂತೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು , ತೆರಿಗೆ ಸುಧಾರಣೆ, ಹಣಕಾಸು , ಮತ್ತು ಅಪೀಲು ಸಮಿತಿಗೆ ನಿರ್ಮಲಾ, ಸವಿತಾ, ಸೌಮ್ಯ, ಲಕ್ಷ್ಮೀ , ಅಕ್ಮಲ್ ಪಾಷಾ, ಶಮೀಉಲ್ಲಾ, ಜಿ ಎಸ್ .ಸತ್ಯರಾಜು ನಾಲ್ಕು ಸ್ಥಾಯಿ ಸಮಿತಿ ಸದಸ್ಯರನ್ನು ನೇಮಕಗೊಳಿಸಿದ್ದು, ಆರೋಗ್ಯ , ಶಿಕ್ಷಣ ಮತ್ತು ಸಾಮಾಜಿಕ ಸಮಿತಿಗೆ ಶೋಭಾ, ಗೋಪಿ, ಭಾಗ್ಯ, ಅಯಾಜ್‍ಪಾಷಾ, ಉಷಾ, ಶಾರದಮ್ಮ, ಭುವನೇಶ್ವರಿರವರನ್ನು ಆಯ್ಕೆ ಮಾಡಲಾಯಿತು. ಅದರಂತೆ ಪಟ್ಟಣ ಯೋಜನೆ ಮತ್ತು ಸುಧಾರಣಾ ಸಮಿತಿಗೆ ; ಸಯ್ಯದ್ ಅಶ್ರತ್ ಉಲ್ಲಾ, ಶ್ರೀನಿವಾಸ್ , ರುಕ್ಮಿಣಿ, ರಮೇಶ್ , ಅಜೀರಾಶೀಮಾ, ಸುನಂದಪಾಲನೇತ್ರಾ, ಪ್ರಮೀಳಾಭರತ್, ನೇಮಗೊಂಡಿದ್ದಾರೆ .ಲೆಕ್ಕಪತ್ರ ಸ್ಥಾಯಿ ಸಮಿತಿಗೆ; ಅಶ್ವಿನಿ ಅನಂತು, ಬೇಗಂಪಲ್ಲವಿ, ಛಾಯಾದೇವಿ, ವೇದಾವತಿ ಅಯೂಬ್‍ಖಾನ್ , ಆರಿಫ್ ಹುಸೇನ್ ಪ್ರದೀಪ್ ಚಂದ್ರ ಆಯ್ಕೆಯಾಗಿದ್ದಾರೆ ಕೊನೆದಾಗಿ ಎಲ್ಲಾ ಸಮಿತಿಗಳಿಗೂ ತಲಾ 7 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು .