ಬೆಂಗಳೂರು: ಮಗನ ಸಿನಿಮಾ ಪ್ರಮೋಶನ್’ಗೆ ಚೆನ್ನಮ್ಮ ವೇದಿಕೆ ಬಳಸಿಕೊಂಡ ಸಚಿವ ಜಮೀರ್ ಅಹ್ಮದ್ ಪುತ್ರನ ಬಗ್ಗೆ ಬಿಜೆಪಿ ಆಕ್ರೋಶ ಹೊರಹಾಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಸಚಿವ ಜಮೀರ್ ಅಹ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. “ನಿಮ್ಮ ಮಗನನ್ನು ದೊಡ್ಡ ಸ್ಟಾರ್ ಮಾಡುವ ತೆವಲಿದ್ದರೆ ಪ್ರತಿ ಜಿಲ್ಲೆಯಲ್ಲೂ ನಿಮ್ಮ ಸ್ವಂತ ದುಡ್ಡಲ್ಲಿ ಸಿನಿಮಾ ಪ್ರಚಾರಕ್ಕಾಗಿ ಕಾರ್ಯಕ್ರಮ ಮಾಡಿ’ ಎಂದು ಕಿಡಿ ಕಾರಿದೆ.
‘ನಿಮ್ಮ ಶೋಕಿಗೆ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ ವೇದಿಕೆ ಬಳಸಿಕೊಂಡು ಮಾಧಕ ವ್ಯಸನ ಪ್ರೇರೇಪಿಸುವ ದೃಶ್ಯ ಪ್ರದರ್ಶಿಸಿ ಆ ಮಹಾತಾಯಿ ಚೆನ್ನಮ್ಮನಿಗೆ ಯಾಕೆ ಅವಮಾನಿಸುತ್ತೀರಿ, ಕೂಡಲೇ ಸಮಸ್ತ ಕನ್ನಡಿಗರಲ್ಲಿ ಕ್ಷಮೆ ಕೇಳಿ’ ಎಂದು ಬಿಜೆಪಿ ಒತ್ತಾಯಿಸಿದೆ.
ನಿಮ್ಮ ಮಗನನ್ನು ದೊಡ್ಡ ಸ್ಟಾರ್ ಮಾಡುವ ತೆವಲಿದ್ದರೆ ಪ್ರತಿ ಜಿಲ್ಲೆಯಲ್ಲೂ ನಿಮ್ಮ ಸ್ವಂತ ದುಡ್ಡಲ್ಲಿ ಸಿನಿಮಾ ಪ್ರಚಾರಕ್ಕಾಗಿ ಕಾರ್ಯಕ್ರಮ ಮಾಡಿ @BZZameerAhmedK ಅವರೇ,
ನಿಮ್ಮ ಶೋಕಿಗೆ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ ವೇದಿಕೆ ಬಳಸಿಕೊಂಡು ಮಾಧಕ ವ್ಯಸನ ಪ್ರೇರೇಪಿಸುವ ದೃಶ್ಯ ಪ್ರದರ್ಶಿಸಿ ಆ ಮಹಾತಾಯಿ ಚೆನ್ನಮ್ಮನಿಗೆ ಯಾಕೆ… pic.twitter.com/Q42waD9Dvr
— BJP Karnataka (@BJP4Karnataka) October 27, 2025



























































