ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಗುರುಗ್ರಾಮ ಮೂಲದ ಆಕ್ಮೆ (ACME ) ಕ್ಲೀನ್ಟೆಕ್ ಸೊಲುಷನ್ ಪ್ರೈವೇಟ್ ಲಿಮಿಟೆಡ್ ಗ್ರೂಪ್ ಕಂಪೆನಿಯು ಗ್ರೀನ್ ಹೈಡ್ರೋಜನ್ ಮತ್ತು ಅಮೋನಿಯಾ ಘಟಕ ಸ್ಥಾಪನೆ ಹಾಗೂ ಪೂರಕವಾಗಿ ಮಂಗಳೂರಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ 52000 ಕೋಟಿ ರೂಪಾಯಿ ಹೂಡಿಕೆ ಮಾಡುವ ಕುರಿತು ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತು. ಇಂಧನ ಸಚಿವ ವಿ. ಸುನಿಲ್ ಕುಮಾರ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಇಲಾಖೆಯ ಆಯುಕ್ತ ರಾದ ಗುಂಜನ್ ಕೃಷ್ಣ, ಆಕ್ಮೆ ಗ್ರೂಪ್ ನ ಉಪಾಧ್ಯಕ್ಷ ಶಶಿ ಶೇಖರ್, ಕಂಪೆನಿಯ ಅಧಿಕಾರಿಗಳಾದ ಎಂ.ವಿ.ವಿ.ಎಸ್.ರೆಡ್ಡಿ, ಅರುಣ್ ಚೋಪ್ರಾ ಉಪಸ್ಥಿತರಿದ್ದರು.
© 2020 Udaya News – Powered by RajasDigital.


















































