ದೆಹಲಿ: ಭಾರತ್ ಗೌರವ್ ಯಾತ್ರಾ ಸೌಲಭ್ಯವನ್ನು ಪಡೆದ ಮೊದಲ ರಾಜ್ಯ ಕರ್ನಾಟಕ ಎನ್ನುವ ಖ್ಯಾತಿ ಪಡೆದಿರುವುದನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವೀಟರ್‌ನಲ್ಲಿ ಹಂಚಿಕೊಂಡಿರದ್ದಾರೆ.
I would like to compliment Karnataka for being the first state to take up the Bharat Gaurav Kashi Yatra train under the Bharat Gaurav scheme. This train brings Kashi and Karnataka closer. Pilgrims and tourists will be able to visit Kashi, Ayodhya and Prayagraj with ease. pic.twitter.com/dN8Mx8f2uf
— Narendra Modi (@narendramodi) November 11, 2022
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಮುಜರಾಯಿ ಸಚಿವೆ ಶಶಿಕಲಾ ಅ ಜೊಲ್ಲೆ, ಮೋದಿಯವರ ಈ ಹೇಳಿಕೆ ಬಹಳ ಸಂತಸದ ವಿಷಯ ಎಂದಿದ್ದಾರೆ.. ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ಲಾಘನೆಗೆ ಒಳಪಟ್ಟ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಬಹಳಷ್ಟು ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಮೊದಲ ಟ್ರೈನ್‌ನ ಯಾತ್ರಾರ್ಥಿಗಳು ಸಂತಸದಿಂದ ಯಾತ್ರೆಯನ್ನು ನಡೆಸುತ್ತಿದ್ದಾರೆ. ಈ ಯಾತ್ರಾರ್ಥಿಗಳಿಗೆ ಕಾಶಿಯಲ್ಲಿ ಸ್ವಾಗತ ಕೋರುವ ಮೂಲಕ ನಮ್ಮ ಇಲಾಖೆಯ ಬದ್ದತೆಯನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವೆ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.