ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ IAF ಗ್ರೂಪ್ ಕ್ಯಾಪ್ಟನ್ ಶುಭಂಶು ಶುಕ್ಲಾ ಅವರು ಪಡೆದ ಅನುಭವವು ಭಾರತದ ಗಗನ್ಯಾನ್ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗೆ ಅತ್ಯಂತ ಅಮೂಲ್ಯವಾಗಿದೆ ಎಂದು ಇಸ್ರೋ ಹೇಳಿದೆ.
ಆಕ್ಸಿಯಮ್ ಸ್ಪೇಸ್ ಮಿಷನ್ -4 (Ax-4) ನ ಭಾಗವಾದ IAF ಗ್ರೂಪ್ ಕ್ಯಾಪ್ಟನ್ ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ “ಗ್ರೇಸ್” ಕ್ಯಾಲಿಫೋರ್ನಿಯಾ ಕರಾವಳಿಯ ಪೆಸಿಫಿಕ್ ಮಹಾಸಾಗರ IST ಸಮಯ ಮಧ್ಯಾಹ್ನ 3:01 ಕ್ಕೆ (4:31 AM CT) ಸ್ಪರ್ಶಿಸಿತು.
20 Days Beyond Earth. 322 Orbits. 1.39 Crore Kilometres.
And now — India’s space hero touches home. 🌍🇮🇳
Group Captain #ShubhanshuShukla becomes the first-ever Indian on the ISS. 🌌🫡
India is here. And we’re only getting started. 💥#AxiomMission4 | #ISRO | #Axiom4 pic.twitter.com/MpSLNLO486
— RX (@TheReal_RX) July 15, 2025
ಈ ಬಗ್ಗೆ ವಿಶ್ಲೇಷಣೆ ಮಾಡಿರುವ ಇಸ್ರೋದ ಬಾಹ್ಯಾಕಾಶ ಅನ್ವಯಿಕೆ ಕೇಂದ್ರದ ನಿರ್ದೇಶಕ ನಿಲೇಶ್ ಎಂ ದೇಸಾಯಿ, ಐಎಸ್‌ಎಸ್‌ನಲ್ಲಿ ಶುಬನ್ಶು ಶುಕ್ಲಾ ಅವರು ಪಡೆದ ಅನುಭವವು ಮುಂದಿನ ಎರಡು ವರ್ಷಗಳಲ್ಲಿ ಯೋಜಿಸಲಾದ ಗಗನಯಾನ ಕಾರ್ಯಕ್ರಮಕ್ಕೆ ಅತ್ಯಂತ ಮೌಲ್ಯಯುತವಾಗಿರುತ್ತದೆ ಎಂದು ಹೇಳಿದರು.
ಇದೇ ವೇಳೆ ಪ್ರತಿಕ್ರಿಯಿಸಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಐಎಸ್‌ಎಸ್‌ನಿಂದ ಶುಕ್ಲಾ ಅವರ ಸುರಕ್ಷಿತ ಮರಳುವಿಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಶಾಶ್ವತ ಸ್ಥಾನವನ್ನು ಸ್ಥಾಪಿಸುತ್ತದೆ ಎಂದು ಹೇಳಿದರು. “ನಾನು ಹೇಳಿದಂತೆ, ಈ ಯಶಸ್ಸಿನೊಂದಿಗೆ, ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಶಾಶ್ವತ ಸ್ಥಾನವನ್ನು ಸ್ಥಾಪಿಸಿದೆ. ಇದು ಇಡೀ ಜಗತ್ತಿಗೆ ಹೆಮ್ಮೆಯ ಕ್ಷಣವಾಗಿದೆ, ಆದರೆ ಇದು ಭಾರತಕ್ಕೆ ವಿಶೇಷ ಮಹತ್ವವನ್ನು ಹೊಂದಿದೆ – ಇದು ನಿಜವಾಗಿಯೂ ಐತಿಹಾಸಿಕ ಕ್ಷಣವಾಗಿದೆ…” ಎಂದರು.
ಶುಕ್ಲಾ, ಸಹ ಗಗನಯಾತ್ರಿಗಳಾದ ಪೆಗ್ಗಿ ವಿಟ್ಸನ್ (ಯುಎಸ್), ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್), ಮತ್ತು ಟಿಬೋರ್ ಕಪು (ಹಂಗೇರಿ) ಅವರೊಂದಿಗೆ ಸೋಮವಾರ ಬೆಳಗಿನ ಜಾವ 3:30 ಕ್ಕೆ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ “ಗ್ರೇಸ್” ಅನ್ನು ಹತ್ತಿದರು.
ಜೂನ್ 26 ರಂದು ಶುಕ್ಲಾ ಐಎಸ್‌ಎಸ್‌ಗೆ ಹಾರಿದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ದೇಶದ ಮೊದಲಿಗರು ಎಂಬ ಮೂಲಕ ಇತಿಹಾಸ ಬರೆದರು. ರಾಕೇಶ್ ಶರ್ಮಾ ಅವರ 1984 ರ ಒಡಿಸ್ಸಿ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.