ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ , ಈ ಬಾರಿಯೂ ಎನ್ಡಿಎ ಮೈತ್ರಿಕೂಟ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಹಾರದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ, ಬಿಹಾರದ ಮಹಿಳಾ ಬಿಜೆಪಿ-ಎನ್ ಡಿಎ ಕಾರ್ಯಕರ್ತರೊಂದಿಗೆ ನಮೋ ಆಪ್ ಮೂಲಕ ಸಂವಾದ ನಡೆಸಿದ ಪ್ರಧಾನಿ, ಕಳೆದ 20 ವರ್ಷಗಳಲ್ಲೇ ಅತ್ಯಧಿಕ ದಾಖಲೆ ಮತಗಳಿಂದ ಎನ್ಡಿಎ ಗೆಲ್ಲಿಸಲು ಜನರು ನಿರ್ಧರಿಸಿದ್ದಾರೆ ಎಂದರು.
ಈ ಬಾರಿಯ ಮತಸಮರದಲ್ಲಿ ಜಂಗಲ್ ರಾಜ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಇಂಡಿಯಾ ಮೈತ್ರಿಕೂಟ ಹೀನಾಯವಾಗಿ ಸೋಲಲಿದೆ ಎಂದು ವಿಶ್ಲೇಷಿಸಿದರು.
ಬಿಹಾರ ಅಖಾಡ ಬಗೆಗಿನ ಸಮೀಕ್ಷೆಗಳನ್ನು ಗಮನಿಸುತ್ತಿದ್ದೇನೆ. ಎನ್ ಡಿಎ ದೊಡ್ಡ ಗೆಲುವು ಸಾಧಿಸುತ್ತದೆ ಎಂದು ಈಗಲೇ ಸುಳಿವು ಸಿಗುತ್ತಿದೆ ಎಂದವರು ಹೇಳಿದರು.


















































