ಶಿವಮೊಗ್ಗ: ಮಲೆನಾಡ ಸೆರಗು ಶಿವಮೊಗ್ಗದಲ್ಲಿ ಮಹಿಳೆ 4 ಮಕ್ಕಳಿಗೆ ಜನ್ಮ ನೀಡಿ ಎಲ್ಲರ ಗಮನಸೆಳೆದಿದ್ದಾರೆ. ಭದ್ರಾವತಿ ತಾಲೂಕು ತಡಸ ಗ್ರಾಮದವರಾಗಿದ್ದು ಆರೀಫ್ ಎಂಬವರ ಪತ್ನಿ ಅಲ್ಮಾಜ್ ಬಾನು ಎಂಬವರು ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದರು. ಸೋಮವಾರ ಬೆಳಿಗ್ಗೆ ಅಲ್ಮಾಜ್ ಬಾನು ಅವರು ನಾಲ್ಕು ಮಕ್ಕಳಿಗೆ ಜನ್ಮನೀಡಿದ್ದಾರೆ. ಎರಡು ಗಂಡು. ಎರಡು ಹೆಣ್ಣು ಮಕ್ಕಳು ಜನಿಸಿದ್ದು ಮಕ್ಕಳು ಆರೋಗ್ಯಪೂರ್ಣವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
© 2020 Udaya News – Powered by RajasDigital.
























































