ಬೆಂಗಳೂರು: ನಟಿ ಮತ್ತು ಮಾಜಿ ಸಂಸದೆಯಾದ ರಮ್ಯಾ (ದಿವ್ಯಾ ಸ್ಪಂದನ) ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಆರೋಪ ಎದುರಿಸುತ್ತಿರುವ ಏಳು ಮಂದಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾ. ಶಿವಶಂಕರ್ ಅಮರಣ್ಣವರ್ ಅವರಿದ್ದ ಪೀಠವು, ಈಗಾಗಲೇ ಆರೋಪಪಟ್ಟಿ ದಾಖಲಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.
ಜಾಮೀನು ಸಿಕ್ಕಿರುವವರು ಕೆ. ಪ್ರಮೋದ್, ಮಂಜುನಾಥ್, ರಾಜೇಶ್ ಸಿ.ವೈ., ಓಬಣ್ಣ ಟಿ., ಗಂಗಾಧರ್ ಕೆ.ಎಂ. ಹಾಗೂ ಚಿನ್ಮಯ್ ಶೆಟ್ಟಿ. ಮತ್ತೊಬ್ಬ ಆರೋಪಿ ವಿಕಾಸ್ ಬಿ.ಎ. ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು (anticipatory bail) ನೀಡಿದೆ.