ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ನಟ ವಿಜಯ್ ದೇವರಕೊಂಡ ಅವರು ಎಲ್ಲರ ಎದುರೇ ರಶ್ಮಿಕಾ ಅವರ ಕೈಗೆ ಮುತ್ತಿಟ್ಟ ವೀಡಿಯೋ ಇದೀಗ ಅಭಿಮಾನಿಗಳ ಚರ್ಚೆಗೆ ಗ್ರಾಸವಾಗಿದೆ.
vijay and rashmika are cute 🥹💕 pic.twitter.com/wYeMrnsEFe
— farbrown✧*。 (@yesssandnoooo) November 12, 2025
ಈ ಘಟನೆ ಬಳಿಕ, ವಿಜಯ್–ರಶ್ಮಿಕಾ ನಿಶ್ಚಿತಾರ್ಥದ ಕುರಿತು ಚರ್ಚೆ ನಡೆದಿರುವಂತೆಯೇ, ಇಬ್ಬರ ನಡುವಿನ ಸಂಬಂಧ “ಖಚಿತ” ಎನ್ನುವ ಅಭಿಮಾನಿಗಳ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿವೆ.
ವೀಡಿಯೋದಲ್ಲಿ ವಿಜಯ್ ದೇವರಕೊಂಡ ರಶ್ಮಿಕಾ ಅವರ ಕೈ ಹಿಡಿದು ಮುತ್ತಿಡುತ್ತಿರುವ ದೃಶ್ಯ ಕಾಣಸಿಗುತ್ತದೆ. ಈ ದೃಶ್ಯವು ನೆಟ್ಟಿಗರ ಹೃದಯ ಗೆದ್ದಿದ್ದು, ಕಾಮೆಂಟ್ ವಿಭಾಗದಲ್ಲಿ “ಬೆಸ್ಟ್ ಜೋಡಿ”, “ಕ್ಯೂಟ್ ಮೊಮೆಂಟ್”, “ಇದು ಪ್ರೀತಿಯ ಘೋಷಣೆ” ಎಂಬ ಪ್ರತಿಕ್ರಿಯೆಗಳು ತುಂಬಿಕೊಂಡಿವೆ.
‘ದಿ ಗರ್ಲ್‌ಫ್ರೆಂಡ್’ ಚಿತ್ರವು ಕಳೆದ ವಾರ ಬಿಡುಗಡೆಯಾಗಿದ್ದು, ನವೆಂಬರ್ 12ರಂದು ಹೈದರಾಬಾದ್‌ನಲ್ಲಿ ಸಕ್ಸಸ್ ಮೀಟ್ ಆಯೋಜಿಸಲಾಯಿತು. ಆ ಸಮಾರಂಭಕ್ಕೆ ವಿಜಯ್ ದೇವರಕೊಂಡ ಅವರು ವಿಶೇಷ ಅತಿಥಿಯಾಗಿ ಹಾಜರಾಗಿದ್ದರು. ಅಲ್ಲಿ ಈ ಇಬ್ಬರು ನಟರ ಮಧ್ಯೆ ನಡೆದ ಸ್ನೇಹಪೂರ್ಣ ಕ್ಷಣವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಹಾಟ್‌ಟಾಪಿಕ್ ಆಗಿದೆ.
ರಶ್ಮಿಕಾ ಮಂದಣ್ಣ ಅವರು ಈ ಕುರಿತು ನೇರ ಪ್ರತಿಕ್ರಿಯೆ ನೀಡದಿದ್ದರೂ, ಅವರ ಕೆಲವು ಪರೋಕ್ಷ ಹೇಳಿಕೆಗಳು ಅಭಿಮಾನಿಗಳ ಊಹೆಗಳಿಗೆ ಮತ್ತಷ್ಟು ಆಹಾರ ಒದಗಿಸಿವೆ.























































