ಮುಂಬೈ: ನಟಿ ಸಮಂತಾ ರುತ್ ಪ್ರಭು ತಮ್ಮ ವೈಯಕ್ತಿಕ ಬದುಕಿನಲ್ಲಿ ಎದುರಿಸಿದ ಹೋರಾಟಗಳ ಕುರಿತು ಮನ ಮುಟ್ಟುವ ರೀತಿಯಲ್ಲಿ ಮಾತನಾಡಿದ್ದಾರೆ. ವಿಶ್ವ ಶೃಂಗಸಭೆ 2025ರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ, ಅವರು ತಮ್ಮ ಬದುಕಿನ ಖಾಸಗಿ ಕ್ಷಣಗಳು ಹೇಗೆ ಸಾರ್ವಜನಿಕವಾಗಿಬಿಟ್ಟವು ಮತ್ತು ಅದರಿಂದ ತಮ್ಮ ಮೇಲೆ ಹೇಗೆ ನಿರಂತರವಾಗಿ ತೀರ್ಪು ನೀಡಲ್ಪಟ್ಟಿತು ಎಂಬುದನ್ನು ಹಂಚಿಕೊಂಡರು.
“ನನ್ನ ಪ್ರತ್ಯೇಕತೆ, ಅನಾರೋಗ್ಯ—ಎಲ್ಲವೂ ತುಂಬಾ ಸಾರ್ವಜನಿಕವಾಗಿತ್ತು. ಜನರು ನನಗೆ ನಿರಂತರವಾಗಿ ದುರ್ಬಲ ಎನ್ನುವ ತೀರ್ಪು ನೀಡುತ್ತಾರೆ. ಟ್ರೋಲ್‌ಗಳು ದುರ್ಬಲತೆಯ ಸಂಕೇತ ಎಂದು ನನ್ನನ್ನು ಹಾಸ್ಯ ಮಾಡುತ್ತಾರೆ,” ಎಂದು ಭಾವುಕರಾಗಿ ಹೇಳಿದರು.
ಸಮಂತಾ, ವೈಯಕ್ತಿಕ ಹೋರಾಟಗಳ ಪಾಶ್ವಭೂಮಿಯಲ್ಲಿ ತಮ್ಮ ವೃತ್ತಿಪರ ಜೀವನದ ಸವಾಲುಗಳ ಬಗ್ಗೆಯೂ ಮಾತನಾಡಿದರು. ‘ಪುಷ್ಪ: ದಿ ರೈಸ್’ ಚಿತ್ರದ ಪ್ರಸಿದ್ಧ “ಊ ಅಂತವಾ” ಹಾಡಿನಲ್ಲಿ ತಮ್ಮ ಪಾತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ನಾನು ಯಾವಾಗಲೂ ನನ್ನನ್ನು ಸೆಕ್ಸಿ ಎಂದು ಪರಿಗಣಿಸಿಲ್ಲ. ಯಾರೂ ನನಗೆ ಬೋಲ್ಡ್ ಪಾತ್ರ ನೀಡಲು ಹೋಗುತ್ತಿರಲಿಲ್ಲ. ಆ ಹಾಡು ನನಗೆ ನನ್ನದೇ ಸವಾಲಾಗಿತ್ತು,” ಎಂದರು.
“ನಾನು ತುಂಬಾ ಮಹತ್ವಾಕಾಂಕ್ಷೆಯವಳು. ಆದರೆ ಮಹತ್ವಾಕಾಂಕ್ಷೆ ಕೇವಲ ಓಟವಾಗಬಾರದು — ಅದು ಉದ್ದೇಶದಿಂದ ನಡಿಸಬೇಕು. ಇಂದಿನ ಯುವಕರು ತಮ್ಮ ಮಾರ್ಗದರ್ಶಕರನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ನಾನು ನನ್ನ ಜೀವನದ ಪಥ ಬದಲಿಸಿದ ಮಾರ್ಗದರ್ಶಕರನ್ನು ಅತಿ ಎಚ್ಚರಿಕೆಯಿಂದ ಆಯ್ಕೆ ಮಾಡಿದ್ದೇನೆ,” ಎನ್ನುತ್ತಾ ನಟಿ ತಮ್ಮ ಮಹತ್ವಾಕಾಂಕ್ಷೆ ಮತ್ತು ಅದಕ್ಕೆ ಉದ್ದೇಶದ ಅಗತ್ಯವನ್ನೂ ಸ್ಪಷ್ಟಪಡಿಸಿದರು.
2024ರಲ್ಲಿ ಬಿಡುಗಡೆಯಾದ ‘ಸಿಟಾಡೆಲ್: ಹನಿ ಬನ್ನಿ’ ವೆಬ್ ಸರಣಿಯಲ್ಲಿ ನಟಿಸಿರುವ ಸಮಂತಾ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಶೀಘ್ರದಲ್ಲೇ ಪ್ರಕಟಣೆ ನೀಡಲಿದ್ದಾರೆ.