ರಾಜಸ್ಥಾನ: ಬಿಜೆಪಿ ನಾಯಕಿ ನೂಪೂರ್ ಶರ್ಮಾ ಹೇಳಿಕೆ ದೇಶ ವಿದೇಶಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದು, ಇತ್ತ ಭಾರತದಲ್ಲಿ ಐಸಿಸ್ ಮಾದರಿಯ ಕ್ರೌರ್ಯವೊಂದು ನಡೆದಿದೆ.
ಉದಯ್ಪುರದಲ್ಲಿ ಭೀಕರ ಹತ್ಯೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಆರೋಪದಲ್ಲಿ ಉದಯ್‌ಪುರದ ಟೈಲರ್‌ನನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಶಿರಚ್ಛೇದನ ಮಾಡಿದ್ದಾರೆ. ಉದಯ್‌ಪುರದ
ಮಾಲ್ದಾಸ್ ಪ್ರದೇಶದಲ್ಲಿ ಈ ಕ್ರೌರ್ಯ ನಡೆದಿದ್ದು ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಈ ಹತ್ಯೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆನ್ನಲಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರನ್ನೂ ಹತ್ಯೆ ಮಾಡುವ ಬೆದರಿಕೆ ಒಡ್ಡಲಾಗಿದೆ ಎನ್ನಲಾಗಿದೆ.
ಈ ಪ್ರಕರಣ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.





































































