ಕೊರೊನಾ ವೈರಸ್ ಮೂರನೇ ಹಂತಕ್ಕೆ ಪ್ರವೇಶ ಮಾಡುತ್ತಿರುವ ಆತಂಕ ಎದುರಾಗಿರುವ ಹೊತ್ತಿನಲ್ಲಿಯೇ ಆರೋಗ್ಯ ಇಲಾಖೆ ಮತ್ತಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದೆ. ಕೋವಿಡ್ ತಡೆಗೆ ಇಂದಿನಿಂದ ಖಾಸಗಿ ಅಂಬುಲೆನ್ಸ್ ರಸ್ತೆಗಿಳಿಯಲಿವೆ. 50 ಖಾಸಗಿ ಅಂಬುಲೆನ್ಸ್ ಗಳು 5 ವಲಯಗಳಲ್ಲಿ ಕಾರ್ಯನಿರ್ವಹಿಸಲಿವೆ. ಇದರ ಜೊತೆಗೆ 40 ಕಾರುಗಳನ್ನ ಬುಕ್ ಮಾಡಿಕೊಂಡು ಸ್ಕ್ವಾಡ್ ರೀತಿ ಬಳಸಿಕೊಳ್ಳಲಾಗುತ್ತದೆ. ಕನಿಷ್ಠ ಒಂದು ತಿಂಗಳು ಗರಿಷ್ಠ ಮೂರು ತಿಂಗಳ ಮಟ್ಟಿಗೆ ಕಾರುಗಳನ್ನು ಬುಕ್ ಮಾಡಿಕೊಳ್ಳಲಾಗಿದೆ.
ಕಾರಿನಲ್ಲಿ ಒಬ್ಬ ಆಯುಷ್ ಡಾಕ್ಟರ್, ಒಬ್ಬ ಪೊಲೀಸ್ ಪೇದೆ ಮತ್ತು ಚಾಲಕ ಇರುತ್ತಾರೆ. ಕ್ವಾರಂಟೈನ್ ಆದವರು ಹೊರಗೆ ಬಂದರೆ ಫೇಸ್ಬುಕ್ ಮಾಡಲು ಪೊಲೀಸರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಸ್ಕ್ವಾಡ್ ಸುರಕ್ಷ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಟಿಕೆಟ್ ವಿತರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.