ಡಿಕೆಶಿ ಮಾತಿಗೆ ಕಲ್ಲಡ್ಕ ಪ್ರಭಾಕರ್ ಭಟ್ ಕನಕಪುರದಲ್ಲಿ ಏಸುವಿನ ಪ್ರತಿಮೆಯನ್ನು ಸ್ಥಾಪನೆ ಮಾಡಿ ಅಂತ ಪ್ರತಿಮಾತು ನುಡಿದಿದ್ದು; ಇದೀಗ ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಮಾಜಿ ಸಚಿವ ರಮಾನಾಥ ರೈ ತಿರುಗೇಟು ನೀಡಿದ್ದಾರೆ. ಅಲ್ಪ ಸಂಖ್ಯಾತರನ್ನು ಗುರಿಯಾಗಿಸಿ ಪ್ರಚೋದನೆ ಹುಟ್ಟಿಸುವ ಕೆಲಸಕೆಲವರು ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ.
ತಮ್ಮ ಲಾಭಕ್ಕಾಗಿ ಧರ್ಮದ ಹೆಸರನ್ನು ಮಧ್ಯದಲ್ಲಿ ತರೋದು ಸೂಕ್ತವಲ್ಲ.ಇಂಥಹ ಕೆಲಸ ಮಾಡೋ ವ್ಯಕ್ತಿಗಳನ್ನು ಸಮಾಜ ಬಹಿಷ್ಕರಿಸಬೇಕು ಎಂದಿದ್ದಾರೆ. ಜೊತೆಗೆ ಕೊಲ್ಲೂರಿನಿಂದ ಕಲ್ಲಡ್ಕ ಶಾಲೆಗೆ ಅಕ್ಕಿ ಹೋಗುತ್ತಿರಲಿಲ್ಲ, ಬದಲಿಗೆ ಚೆಕ್ ಮೂಲಕ ಹಣ ಪಾಸಾಗುತ್ತಿತ್ತು. ಭಕ್ತರು ಹುಂಡಿಗೆ ಹಾಕುತ್ತಿದ್ದ ಹಣ ಪಡೆಯುತ್ತಿದ್ದರು ಅಂತ ಕೆಣಕ್ಕಿದ್ದಾರೆ . ಇನ್ನು ಇದೇ ಸಂದರ್ಭದಲ್ಲಿ ನಾನು ಯಾವುದೇ ರೀತಿಯಲ್ಲಿ ಮತೀಯವಾದಕ್ಕೆ ಬೆಂಬಲ ಸೂಚಿಸೋದಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ.