ಕೇಂದ್ರ ಸರ್ಕಾರ ಜಾರಿ ತಂದಿರುವ ಸಿಎಎ ಕಾಯ್ದೆ ವಿರೋಧಿ ಕಾವು ಕಲ್ಬುರ್ಗಿಯಲ್ಲಿ ಏರುತ್ತಿದೆ. ಕರ್ನಾಟಕ ಪೀಪಲ್ಸ್ ಫಾರಂ ಇವತ್ತು ಸಂಜೆ 3 ಗಂಟೆ ಕಲ್ಬುರ್ಗಿಯ ಪೀರ್ ಬಂಗಾಲಿ ಮೈದಾನದಲ್ಲಿ ಕರೆ ನೀಡಿರುವ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಹತ್ತು ಜಿಲ್ಲೆಗಳ ಸಾವಿರಾರು ಮಂದಿ ಪಾದಯಾತ್ರೆ ಮಾಡಿಕೊಂಡು ಬರುತ್ತಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಪಕ್ಷ ಭೇದ ಮರೆತು ಎಲ್ಲಾ ಪಕ್ಷದ ಪ್ರಮುಖ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಡಿಎಂಕೆ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಸ್ಟಾಲಿನ್, ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸಿತಾರಾಮ್ ಯೆಚೂರಿ, ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್, ಸಜ್ಜದಾ ನಶೀನ್ ದರ್ಗಾ ಹಜರತ್ ಖ್ವಾಜಾ ಬಾಂದಾ ನವಾಜ್ ಹಜರತ್ ಡಾ ಸೈಯದ್ ಷಾ ಗೇಸುದ್ರಾಸ್ ಖುಸ್ರೋ ಹುಸೇನ್ ಸಾಬ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಪೀಪಲ್ಸ್ ಫಾರಂ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ತಿಳಿಸಿದ್ದಾರೆ.
ವಾ.ಓ: ಬಿಜೆಪಿ ನೇತೃತ್ವದ ಸರ್ಕಾರ ಜಾರಿ ತಂದಿರುವ ಸಿಎಎ, ಎನ್ಪಿಆರ್, ಎನ್ಆರ್ಐಸಿ ಜನವಿರೋಧಿ ನೀತಿಯಾಗಿದೆ. ಇದನ್ನು ಸಮಾಜದ ಎಲ್ಲಾ ಬಾಂಧವರು ವಿರೋಧಿಸುತ್ತಿದ್ದಾರೆ. ಹಾಗಾಗಿ ಈ ಪ್ರತಿಭಟನಾ ಸಮಾವೇಶದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸಲಾಗುವುದು. ಕಲ್ಬುರ್ಗಿಯ ಈ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಹತ್ತು ಜಿಲ್ಲೆಯ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದಾರೆ.