ಬೆಂಗಳೂರು: ರಾಷ್ಟ್ರಧ್ವಜ ವಿಚಾರದಲ್ಲಿ ಕೆ.ಎಸ್.ಈಶ್ವರಪ್ಪ ವಿರುದ್ದ ಸಮರಕ್ಕಿಳಿದಿರುವ ಕಾಂಗ್ರೆಸ್ ಸಚಿವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದೆ. ಅಧಿವೇಶನದಲ್ಲಿ ಹೋರಾಟವನ್ನು ತೀವ್ತಗೊಳಿಸಿರುವ ಕಾಂಗ್ರೆಸ್ ಈ ವಿಚಾರವನ್ನು ಮುಂದಿಟ್ಟು ಬೊಮ್ಮಾಯಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನದಲ್ಲಿದೆ.
ಈ ನಡುವೆ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಗ್ರಾಮೀಣ ಅಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಅವರನ್ನು ವಜಾಮಾಡದೆ ಇದ್ದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂಬ ಸಂದೇಶವನ್ನು ಅವರು ಟ್ವೀಟ್ ಮೂಲಕ ರವಾನಿಸಿದ್ದಾರೆ.
ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವ ಗ್ರಾಮೀಣ ಅಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಗುರುವಾರ 11 ಗಂಟೆಯೊಳಗೆ ವಜಾಮಾಡದೆ ಇದ್ದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಭಟನೆ ಮುಂದುವರೆಸುತ್ತೇವೆ.
1/13#ದೇಶದ್ರೋಹಿಈಶ್ವರಪ್ಪ #ದೇಶದ್ರೋಹಿಬಿಜೆಪಿ— Siddaramaiah (@siddaramaiah) February 16, 2022
ಸಚಿವ ಈಶ್ವರಪ್ಪರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಅಲ್ಲ. ಬಿಜೆಪಿ ಪಕ್ಷ ಮತ್ತು ಪರಿವಾರದ ಅಭಿಪ್ರಾಯವನ್ನೇ ಅವರು ಹೇಳಿದ್ದಾರೆ. ಅಂತರಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಆರ್.ಎಸ್.ಎಸ್ ಸರಸಂಘ ಚಾಲಕ ಮೋಹನ್ ಭಾಗವತ್‌ವರೆಗೆ ಎಲ್ಲರ ಅಭಿಪ್ರಾಯವೂ ಇದೇ ಆಗಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.
ಸಚಿವ ಈಶ್ವರಪ್ಪನವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಅಲ್ಲ. ತಮ್ಮ @BJP4India ಪಕ್ಷ ಮತ್ತು ಪರಿವಾರದ ಅಭಿಪ್ರಾಯವನ್ನೇ ಅವರು ಹೇಳಿದ್ದಾರೆ. ಅಂತರಂಗದಲ್ಲಿ ಪ್ರಧಾನಿ @narendramodi ಅವರಿಂದ ಹಿಡಿದು ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ವರೆಗೆ ಎಲ್ಲರ ಅಭಿಪ್ರಾಯವೂ ಇದೇ ಆಗಿದೆ.
3/13#ದೇಶದ್ರೋಹಿಈಶ್ವರಪ್ಪ— Siddaramaiah (@siddaramaiah) February 16, 2022
ಇದೇ ವೇಳೆ, ದೇಶದ್ರೋಹಿ ಎಂಬ ಟ್ಯಾಗ್‌ಲೈನ್ ಮೂಲಕ ನೆಟ್ಟಿಗರು ಅಭಿಯಾನ ಆರಂಭಿಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.
‘ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹರಿಸ್ತೀವೆ’
ಎಂದು ಹೇಳಿಕೆ ಕೊಟ್ಟು. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಕೆ.ಎಸ್.ಈಶ್ವರಪ್ಪ ಕೂಡಲೇ ರಾಜೀನಾಮೆ ನೀಡಿ. ಬೇಷರತ್ತಾಗಿ ದೇಶದ ಕ್ಷಮೆ ಕೇಳಬೇಕು ಎಂದು ನೆಟ್ಟಿಗರೂ ಆಗ್ರಹಿಸಿದ್ದಾರೆ.
'ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹರಿಸ್ತೀವೆ'
ಎಂದು ಹೇಳಿಕೆ ಕೊಟ್ಟು.
ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಕೆ. ಎಸ್.ಈಶ್ವರಪ್ಪ ಈ ಕೂಡಲೆ ಸಚಿವ ಸ್ಥಾನ ಹಾಗು ಶಾಸಕ ಸ್ಥಾನಕ್ಕೆರಾಜೀನಾಮೆ ನೀಡಿ. ಬೇಷರತ್ತಾಗಿ ದೇಶದ ಕ್ಷಮೆ ಕೇಳಬೇಕು.#ದೇಶದ್ರೋಹಿಈಶ್ವರಪ್ಪ pic.twitter.com/zqk90GjSy2— sonu Radha (@IncRadha) February 16, 2022
.
#ದೇಶದ್ರೋಹಿಈಶ್ವರಪ್ಪ#ದೇಶದ್ರೋಹಿಈಶ್ವರಪ್ಪ #ದೇಶದ್ರೋಹಿಈಶ್ವರಪ್ಪ #ದೇಶದ್ರೋಹಿಈಶ್ವರಪ್ಪ #ದೇಶದ್ರೋಹಿಈಶ್ವರಪ್ಪ https://t.co/S599IL9wOD
— ShivaRaj (@SHIVALINGKAMBL4) February 16, 2022