ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಯಶೋಗಾಥೆ ಬರೆದಿದೆ. ಎನ್’ವಿಎಸ್-02 ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯಿಸಿದೆ. ಈ ಮೂಲಕ ಇಸ್ರೋ ಸಂಸ್ಥೆಯು ತನ್ನ 100ನೇ ಉಡ್ಡಯನವನ್ನು ಬುಧವಾರ ಯಶಸ್ವಿಯಾಗಿ ನಡೆಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬುಧವಾರ ಬೆಳಿಗ್ಗೆ 6.23ರ ಸುಮಾರಿಗೆ ಎನ್’ವಿಎಸ್-02 ಉಪಗ್ರಹ ಹೊತ್ತ ಜಿಎಸ್ಎಲ್’ವಿ ನಭಕ್ಕೆ ಜಿಗಿದಿದೆ. ಸ್ವದೇಶಿ ಜಿಪಿಎಸ್ ಯೋಜನೆಯ ಭಾಗವಾಗಿ ಎನ್’ವಿಎಸ್-02 ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.
1963ರ ನ.21ರಂದು ಅಮೆರಿಕಾದ ರಾಕೆಟ್ ಬಳಸಿ ಮೊದಲ ಬಾರಿಗೆ ಉಪಗ್ರಹ ಮಾಡಿದ್ದ ಇಸ್ರೋ, ಬುಧವಾರ ತನ್ನ 100ನೇ ಉಡ್ಡಯನದೊಂದಿಗೆ ಇತಿಹಾಸ ಸೃಷ್ಟಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಬಾಹ್ಯಾಕಾಶ ನ್ಯಾವಿಗೇಷನ್ನಲ್ಲಿ ಭಾರತ ಹೊಸ ಎತ್ತರಕ್ಕೆ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದೆ.