ಕಾಬುಲ್: ಆಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಮುಂಜಾನೆ ಸಂಭವಿಸಿದ ವಿಕೋಪದಲ್ಲಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಮಜಾರ್-ಎ ಶರೀಫ್ ನಗರದ ಬಳಿ ಈ ಭೂಕಂಪ ಸಂಭವಿಸಿದ್ದು, ಹಲವಾರು ಕಟ್ಟಡಗಳು ನೆಲಕ್ಕುರುಳಿವೆ. ಭೂಕಂಪನದ ತೀವ್ರತೆಯು 6.3 ರಷ್ಟು ದಾಖಲಾಗಿದೆ ಎನ್ನಲಾಗಿದೆ.


















































