ಬಾಲಿವುಡ್ ನ ಡ್ರಾಮಾ ಕ್ವೀನ್ ಪಟ್ಟವನ್ನು ಗಿಟ್ಟಿಸಿಕೊಂಡಿರುವ ನಟಿ ರಾಖಿ ಸಾವಂತ್ ಒಂದಿಲ್ಲೊಂದು ತಲೆಹರಟೆ ಮಾಡುತ್ತಲೇ ನೆಟ್ಟಿಗರ ಸಿಟ್ಟಿಗೆ ಕಾರಣಳಾಗಿದ್ದಾಳೆ..ಮೂರು ತಿಂಗಳ ಹಿಂದಷ್ಟೇ ತಾನು ಯುಕೆ ಮೂಲದ ರಿತೇಶ್ ಎಂಬ ಯುವಕನೊಂದಿಗೆ ವಿವಾಹಿತಳಾಗಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ರಾಖಿ ಪತಿಯನ್ನು ಪರಿಚಯಿಸೋ ಮುನ್ನವೇ ಸದ್ಯ ಮಗಳನ್ನು ಪರಿಚಯಿಸಿ ಸುದ್ದಿಯಲ್ಲಿದ್ದಾಳೆ..ಯಸ್.. ”ಸ್ನೇಹಿತರೇ.. ಈಕೆ ನನ್ನ ಪುತ್ರಿ. ಇವಳ ಮೇಲೆ ನಿಮ್ಮ ಆಶೀರ್ವಾದ ಇರಲಿ” ಎಂದು ಕ್ಯಾಪ್ಷನ್ ಕೊಟ್ಟು ಮಗಳ ವಿಡಿಯೋನ ರಾಖಿ ಸಾವಂತ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋನ ನೋಡಿ ನೆಟ್ಟಿಗರಂತೂ ರಾಖಿ ಸಾವಂತ್ ಗೆ ಛೀಮಾರಿ ಹಾಕುತ್ತಿದ್ದಾರೆ. ಯಾಕಂದ್ರೆ, ಮಗುವಿನ ಆ ವಿಡಿಯೋದಲ್ಲಿ ರಾಖಿ ಸಾವಂತ್ ಬೇಬಿ ಫಿಲ್ಟರ್ ಬಳಸಿರುವ ಹಾಗಿದೆ.


ಬೇಬಿ ಫಿಲ್ಟರ್ ಬಳಸಿ ವಿಡಿಯೋ ಕ್ರಿಯೇಟ್ ಮಾಡಿ, ಇನ್ಸ್ಟಾಗ್ರಾಮ್ ನಲ್ಲಿ
ಮಗಳು ಅಂತ ಹೇಳಿಕೊಂಡು ಫೂಲ್ ಮಾಡುತ್ತಿರುವ ರಾಖಿ ಸಾವಂತ್ ಗೆ ತಲೆಕೆಟ್ಟಿದೆ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಕೆಲಸವೂ ಇಲ್ಲ, ಚಿತ್ರರಂಗದಿಂದ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಸುದ್ದಿಯಲ್ಲಿ ಇರಲು ಹೀಗೆಲ್ಲಾ
ಮಾಡುತ್ತಿದ್ದಾರೆ ಅನ್ನೋದು ನೆಟ್ಟಿಗರ ವಾದ.