ಬೆಂಗಳೂರು : ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಿಳುನಾಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ತಪ್ಪು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಾವು ಅಣೆಕಟ್ಟು ಕಟ್ಟಲು ಅವರ ಅನುಮತಿ ಏಕೆ ಬೇಕು. ಕೋರ್ಟ್ ಆದೇಶ ಪ್ರಕಾರ ನಮ್ಮ ಕೆಲಸ ನಾವು ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದರು. ಪತ್ರ ಬರೆದು ಅನುಮತಿ ಕೋರಿದರೆ ಯಾರೂ ಒಪ್ಪುವುದಿಲ್ಲ. ನಾವು ಅಣೆಕಟ್ಟು ಕಟ್ಟುವುದರಿಂದ ತಮಿಳುನಾಡಿಗೆ ನೀರಿನ ಸಮಸ್ಯೆ ಆಗುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ಈ ರೀತಿ ಪತ್ರ ಬರೆದು ಒಪ್ಪಿಗೆ ಕೇಳಿರಲಿಲ್ಲ ಎಂದರು.
ಬಸವನಗುಡಿಯ ಶ್ರೀ ನಗರದಲ್ಲಿ ಇಂದು ಯುವ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿನಸಿ ಕಿಟ್‍ಗಳನ್ನು ವಿತರಿಸಿ ಸಿದ್ದರಾಮಯ್ಯ ಅವರು ಮಾತನಾಡಿದರು.
ನಾನು ಮುಖ್ಯಮಂತ್ರಿ ಆಗಿದಿದ್ದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲನಾ ಸೀತಾರಾಮನ್ ಅವರ ಕಚೇರಿ ಮುಂದೆ ಧರಣಿ ಕೂರುತ್ತಿದ್ದೆ. ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವುದಿಲ್ಲ. 15 ನೇ ಹಣಕಾಸು ಆಯೋಗದ ವರದಿಯಂತೆ ನಮಗೆ 5495 ಕೋಟಿ ಹಣ ಬರಬೇಕು. ಆದರೆ, ಯಾರು ಸಹ ತುಟಿ ಬಿಚ್ಚಲ್ಲ ಎಂದರು.
ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಹುದ್ದೆಯಿಂದ ತೆಗೆಯುತ್ತಾರೆ ಎಂಬ ಭಯ. ಇಂತಹ ಸರ್ಕಾರ ಬೇಕೇ ಎಂದು ಪ್ರಶ್ನಿಸಿದರು. ಬಸವನಗುಡಿ ಜನ ದಯವಿಟ್ಟು ಬಿಜೆಪಿ ಗೆ ಮತ ಹಾಕಬೇಡಿ ಎಂದು ಮನವಿ ಮಾಡಿದರು.
ಕರೋನ ಸಂಧರ್ಭದಲ್ಲಿ ಸರ್ಕರ ಜನರ ಸಂಕಷ್ಟ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಪ್ರತಿಯೊಬ್ಬರಿಗೂ ಹತ್ತು ಸಾವಿರ ಕೊಡಿ ಎಂದು ಒತ್ತಾಯ ಮಾಡಿದ್ವಿ ನಾವು ಇದ್ದಿದ್ದರೆ ಹತ್ತು ಸಾವಿರ ಪರಿಹಾರ ಮತ್ತು ಹಣ ಕೊಡುತ್ತಿದ್ದೆವು. ಹತ್ತು ಕೆಜಿ ಕೊಟ್ಟಿದ್ರೆ ಇವರ ಗಂಟೇನು ಹೋಗುತ್ತಿತ್ತೆ.
ಲಸಿಕೆ ಹಾಕಿಸಿಕೊಳ್ಳದವರಿಗೆ ಅದರಲ್ಲಿಯೂ ಮಕ್ಕಳಿಗೆ ಮೂರನೇ ಅಲೆ ಅಪಾಯಕಾರಿ ಆಗಬಹುದು ಎಂದು ಜಯದೇವ ಹೃದ್ರೋಗ ಸಂಸ್ಥೆಯ ಡಾ. ಮಂಜುನಾಥ್ ಅವರು ಎಚ್ಚರಿಕೆ ನೀಡಿದ್ದಾರೆ. ತಜ್ಞರು ಹೇಳುತ್ತಿದ್ದರೂ ಸರ್ಕಾರ ಎಚ್ಚರಿಕೆ ವಹಿಸುತ್ತಿಲ್ಲ. ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದು ನಾವು. ಆದರೆ ಈ ಸರ್ಕಾರ ಅದನ್ನು ಮುಚ್ಚಲು ಹೊರಟಿದೆ. ಇವರ ಮನೆ ಹಾಳಾಗ ಎಂದು ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಜತೆ ವಿಪಕ್ಷಗಳು ಶಾಮೀಲು ಅನ್ನೋ ಯತ್ನಾಳ್ ಹೇಳಿಕೆ ವಿಚಾರ. ಅಂತಹ ಭ್ರಷ್ಟ ಸರ್ಕಾರದಲ್ಲಿ ಇವರೇಕೆ ಶಾಸಕನಾಗಿ ಮುಂದೂವರೆಯಬೇಕು. ಬಹಳ ದಿನದಿಂದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ರೆ ಅಂತಹ ಕಡೆ ಶಾಸಕನಾಗಿ ಮುಂದುವರೆದಿರುವುದು ಏಕೆ ಎಂದರು.
ನಮ್ಮ ಬಗ್ಗೆ ಮಾತನಾಡಲು ಯತ್ನಾಳ್ ಅವರಿಗೆ ಅಧಿಕಾರ ಇಲ್ಲ. ಕೆ.ಆರ್.ಎಸ್. ಅಣೆಕಟ್ಟಿಗೆ ಅಡ್ಡಲಾಗಿ ಸುಮಲತಾ ಅವರನ್ನು ಮಲಗಿಸಿ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದನ್ನು ಸುಮಲತಾ ಅವರೇ ನೋಡಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.