ಮನಸಾರೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ್ದ ನಟಿ ಐಂದ್ರಿತಾ ಹಾಗೂ ದೂದ್ ಪೇಡ ದಿಗಂತ್ ಜೋಡಿ ಲವ್ವಿ ಡವ್ವಿ ಅಂತ ಕೊಂಚ ಕಾಲ ದೂಡಿ, ವಿವಾಹಿತರಾಗಿ ಇಂದಿಗೆ ಮೊದಲ ವರ್ಷದ ಸಂಭ್ರಮ ಆಚರಿಸಿಕೊಂಡಿದ್ದಾರೆ ಬೆಂಗಳೂರಿನ ಹೊರವಲಯದ ನಂದಿ ಬೆಟ್ಟದ ಸಮೀಪವಿರುವ ಡಿಸ್ಕವರಿ ವಿಂಟೇಜ್ ರೆಸಾರ್ಟ್ ನಲ್ಲಿ ಬಂಗಾಳಿ ಹಾಗೂ ಮಲೆನಾಡಿನ ಬ್ರಾಹ್ಮಣ ಸಂಪ್ರದಾಯದಂತೆ ಹಸೆಮಣೆ ಏರಿತ್ತು ಈ ಸಿನಿ ಜೋಡಿ..
ಈ ಸಂಭ್ರಮವನ್ನು ದಿವಂತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಜೀವನದಲ್ಲಿ ನಿಜವಾದ ಸಂತೋಷವನ್ನು ತಂದಿದ್ದಕ್ಕೆ ಧನ್ಯವಾದ..ನೀನು ಬಂದ ಮೇಲೆ ನನ್ನ ಜೀವನಕ್ಕೊಂದು ಅರ್ಥ ಬಂದಿದೆ..!! ನೀನು ನನ್ನನ್ನು ಪ್ರೀತಿಸುವಷ್ಟು ನಾನೂ ನಿನ್ನನ್ನು ಪ್ರೀತಿಸಬೇಕೆಂದು ನಾನು ಬಯಸುತ್ತೇನೆ..!! ಹ್ಯಾಪಿ ಆನಿವರ್ಸರಿ ಮೈ ಲೈವ್ ಎಂದು ದಿಗಂತ್ ಬರೆದುಕೊಂಡಿದ್ದಾರೆ.