ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹೀಗೆ ಹಲವು ಸಮಸ್ಯೆಗಳನ್ನು ಸಮಾಜದೆದುರು ತಂದು ಜನರ ಮನಮುಟ್ಟಿಸೋದು ಒಬ್ಬ ಪತ್ರಕರ್ತನ ಆದ್ಯ ಕರ್ತವ್ಯ.ಆದ್ರೆ ಇದನ್ನೆಲ್ಲಾ ಮರೆತು ಪತ್ರಕರ್ತನೊಬ್ಬ ಭ್ರಷ್ಟಾಚಾರ ದಂಧೆಗಿಳಿದಿದ್ದಾರೆ . ಭ್ರಷ್ಟಾಚಾರ ವಿರೋಧಿ ಸಂಘಟನೆಯ ಉಪಾಧ್ಯಕ್ಷರೇ ಭಷ್ಟಾಚಾರದ ಹಾದಿ ಹಿಡಿದಿದ್ದಾರೆ.ಆದ್ರೆ ಈತ ಕೇವಲ ಒಬ್ಬ ಉಪಾಧ್ಯಕ್ಷ ಮಾತ್ರವಲ್ಲದೆ ಪತ್ರಕತನೂ ಹೌದು…..
ಮಂಜುನಾಥ್ ಎಂಬ ಈತ ಪ್ರಜಾಸೊಗಡು ಎಂಬ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಭ್ರಷ್ಟಾಚಾರ ವಿರೋಧಿ ಸಂಘಟನೆಯ ಉಪಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ … ಭ್ರಷ್ಟಾಚಾರ ದಂಧೆಗಿಳಿಯಲು ಮುಂದಾಗಿರೋ ಮಂಜುನಾಥ್ ದಾವಣಗೆರೆ ಜಿಲ್ಲೆಯ ಪಿಡಿಒರೊಬ್ಬರಿಗೆ ವಸೂಲಿಗಾಗಿ ಕರೆಮಾಡಿದ್ದು ಇದರ ಆಡಿಯೋ ಉದಯ ನ್ಯೂಸ್ ಡಾಟ್ ಕಾಮ್‍ಗೆ ಲಭ್ಯವಾಗಿದೆ.