ಕಿಲ್ಲರ್ ವೈರಸ್ ಕೊರೋನಾ ಸೋಂಕು ವಿಶ್ವದೆಲ್ಲೆಡೆ ಹರಡಿದ್ದು ಭಾರತ ಸೇರಿದಂತೆ ಬಹುತೇಕ ಹಲವು ರಾಷ್ಟ್ರಗಳು ಕಳೆದ 1 ವರೆ ತಿಂಗಳಿನಿಂದ ಲಾಕ್‍ಡೌನ್ ಆಗಿದ್ದು ಎಲ್ಲಾ ಕೆಲಸ ಕಾರ್ಯಗಳು ಶಟ್‍ಡೌನ್ ಆಗಿದೆ. ಪರಿಣಾಮ ಜನರಿಗೆ ಕೆಲಸವಿಲ್ಲದೆ ನಿರ್ಗತಿಕರಾಗಿದ್ದಾರೆ ಶ್ರೀಮಂತರಲ್ಲಿ ಹಣವಿದ್ದು ಅವರು ಜೀವನ ಸಾಗಿಸ್ತಾ ಇದ್ರೆ ಬಡವರಿಗೆ ಹಲವು ಸಂಘಸಂಸ್ಥೆಗಳು ದಿನಸಿಗಳನ್ನು ನೀಡಿ ಸಹಾಯ ಮಾಡುತ್ತಿದೆ. ಆದ್ರೆ ಮಧ್ಯಮವರ್ಗದ ಜನರು ತೀರಾ ನೋವು ಅನುಭವಿಸುತ್ತಿದ್ದಾರೆ.
ಈ ಹಿನ್ನಲೆ ಇದೀಗ ರಾಜ್ಯ ಸರ್ಕಾರದಿಂದ ಬಡವರಿಗೆ ಹಾಗೂ ಮಧ್ಯಮವರ್ಗದವರಿಗೆ ಬಂಪರ್ ಬಹುಮಾನವನ್ನು ಸಿ.ಎಂ ಯಡಿಯೂರಪ್ಪ ಘೋಷಿಸಿದ್ದಾರೆ.ದುಡಿಮೆ ಇಲ್ಲದೆ ನಷ್ಟದ ಹಾದಿಯಲ್ಲಿರೊ ಜನರ ಕೈ ಹಿಡಿದಿದ್ದಾರೆ ಸಿ.ಎಂ ಬಿಎಸ್ ವೈ. ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಬಿಎಸ್‍ವೈ ರಾಜ್ಯದಲ್ಲಿ ಸ್ಥಗಿತಗೊಂಡಿರುವ ಆರ್ಥಿಕತೆಗೆ ಮತ್ತೆ ಉತ್ತೇಜನ ನೀಡುವ ಹಾಗೂ ಕಷ್ಟದಲ್ಲಿರುವ ಎಲ್ಲರಿಗೂ ಪರಿಹಾರ ನೀಡುವ ಉದ್ದೇಶದಿಂದ ರಾಜ್ಯಕ್ಕೆ 1610 ಕೋಟಿಯ ವಿಶೇಷ ಪ್ಯಾಕೇಜನ್ನು ಘೋಷಣೆ ಮಾಡಿದ್ದಾರೆ.
ಇನ್ನು ಯಾವ ರೀತಿ ಪ್ಯಾಕೇಜನ್ನು ವಿಂಗಡಿಸಿದ್ದಾರೆ ಅನ್ನೋದನ್ನು ಗಮನಿಸುದಾದ್ರೆ-
1.ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ 2 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲು ಘೋಷಣೆ.
2.ಶೇ. 1ರಷ್ಟು ಗ್ರಾಹಕರ ವಿದ್ಯುತ್ ಬಿಲ್ ಕಡಿತ
3.ತಲಾ 5000 ಹಣವನ್ನು 7.75 ಲಕ್ಷ ಆಟೋ, ಟ್ಯಾಕ್ಸಿ ಹಾಗೂ 60000 ಅಗಸರ ಬ್ಯಾಂಕ್ ಖಾತೆಗೆ ಜಮಾವಣೆ
4.ಕೌರಿಕ ವರ್ಗದವರಿಗೆ 5000 ರೂ ಆರ್ಥಿಕ ನೆರವು
5.ರಾಜ್ಯದಲ್ಲಿ ನೋಂದಾಯಿಸಿಕೊಂಡ 18 ಲಕ್ಷ ಕಟ್ಟಡ ಕಾರ್ಮಿಕರ ಖಾತೆ 2ಸಾವಿರವಲ್ಲದೆ ಹೆಚ್ಚುವರಿ 2000 ರೂ ಜಮೆ
6.ಉದ್ಯಮದ ಹೆಚ್ಚಳಕ್ಕಾಗಿ ನೇಕಾರರಿಗೆ , ನೇಕಾರ ಸಮ್ಮಾನ್ ಯೋಜನೆ ಮೂಲಕ 80 ಕೋಟಿ ರೂ ಬಿಡುಗಡೆ.. 1 ಲಕ್ಷ ವರೆಗಿನ ಸಾಲ ಮನ್ನ
7.ಹೂ ಬೆಳೆಗಾರರಿಗೆ ಎಕರೆಗೆ ತಲಾ 25,000 ಪರಿಹಾರ ನೆರವು ಘೋಷಣೆ ಹಾಗೂ ಇದರ ಜೊತೆ ತರಕಾರಿ ಮತ್ತು ಹಣ್ಣು ಬೆಳೆಗಾರರರಿಗೆ ನೆರವು ಸಿಗೋ ಸಾಧ್ಯತೆ.