ಟಯರ್ ಸ್ಪೋಟಗೊಂಡು ಕ್ಯಾಂಟರ್ ಪಲ್ಟಿಯಾಗಿರುವ ಘಟನೆ ನರಸಾಪುರದ ಬೆಳ್ಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಚೆಳ್ಳಕೆರೆಯಿಂದ ಕೋಲಾರ ಮಾರುಕಟ್ಟೆಗೆ ಟೊಮೆಟೊ ಲೋಡ್ ಹೊತ್ತು ಆಗಮಿಸುತ್ತಿದ್ದ ಕ್ಯಾಂಟರ್ ಮಾರ್ಗ ಮಧ್ಯೆ ಟಯರ್ ಸ್ಪೋಟಗೊಂಡ ಪರಿಣಾಮ ಈ ಅನಾಹುತ ಸಂಭವಿಸಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಯನಗಳು ಚಲಿಸಲು ಮಾರ್ಗ ಬದಲಿಸಿ ಪ್ರಯಾಣಕ್ಕೆ ದಾರಿಮಾಡಿಕೊಟ್ಟಿದ್ದಾರೆ. ಘಟನೆಯಲ್ಲಿ ಕ್ಯಾಂಟರ್ ನಲ್ಲಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದಾರೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
© 2020 Udaya News – Powered by RajasDigital.