ದೊಡ್ಡಬಳ್ಳಾಪುರ:-ಬೆಂಗಳೂರು ಗ್ರಾಮಾಂತರ ಜಿಲ್ಲೆ ತೂಬಗೆರೆ ಹೋಬಳಿಯ ಹಿರೇಮುದ್ದೇನಹಳ್ಳಿ-ಕಲ್ಲುಕೋಟೆ ಅರಣ್ಯಪ್ರದೇಶದ ಅಂಚಿನಲ್ಲಿರುವ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ. ಗ್ರಾಮದ ಚಿಕ್ಕ ನರಸಿಂಹಯ್ಯ ಎಂಬವರಿಗೆ ಸೇರಿದ ಕುರಿಹಿಂಡಿನ ಮೇಲೆ ಚಿರತೆ ಹಾಡು-ಹಗಲೇ ಚಿರತೆ ದಾಳಿಮಾಡಿತ್ತು. ಈ ಚಿರತೆಯ ಸೆರೆಗೆ ಕಸರತ್ತು ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಬೋನನ್ನು ಇಟ್ಟಿದ್ದರು. ಆಗಾಗ್ಗೆ ದಾಳಿ ಮಾಡಿ ಗ್ರಾಮಸ್ಥರ ನಿದ್ದೆ ಕೆಡಿಸಿದ್ದ ಚಿರತೆ ಇದೀಗ ಅರಣ್ಯ ಇಲಾಖೆ ಕಾರ್ಯಚರಣೆಯಿಂದ ಬೋನಿಗೆ ಬಿದ್ದಿದೆ.
© 2020 Udaya News – Powered by RajasDigital.