ನಿಧಿ ಆಸೆಗಾಗಿ ಶಿವನ ದೇವಸ್ಥಾನದ ದ್ವಾರವನ್ನು ಡೈನಮೈಟ್ ಬಳಸಿ ಒಡೆದ ದುಷ್ಕರ್ಮಿಗಳು..
ಬೆಂಗಳೂರು: ನಿಧಿಯಾಸೆಗಾಗಿ ದುಷ್ಕರ್ಮಿಗಳು ಚೋಳರ ಕಾಲದ ಶಿವನ ದೇವಸ್ಥಾನ ದ್ವಾರವನ್ನು ಡೈನಮೇಟ್ ಬಳಸಿ ಒಡೆದಿರುವ ಘಟನೆ ತಾಲೂಕಿನ ಮಾಡೇಶ್ವರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬೆಟ್ಟದ ತಪ್ಪಲಿನಲ್ಲಿರುವ ಪುರಾತನ ದೇಗುಲದ ಗರ್ಭಗುಡಿಯ ದ್ವಾರವನ್ನು ಸ್ಪೋಟಿಸಿರುವುದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಶಿವನ ದೇವಸ್ಥಾನದಲ್ಲಿ ನಿತ್ಯ ಪೂಜೆ ಪುನಸ್ಕಾರ ನಡೆಯುತ್ತಿತ್ತು. ರಾತ್ರಿ ವೇಳೆ ಈ ದುಷ್ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಗ್ರಾಮದಲ್ಲಿ ಪುರಾತನ ಕಾಲದ ಹಲವು ಕುರುಹುಗಳಿದ್ದು, ತನ್ನದೇ ಇತಿಹಾಸ ಹೊಂದಿದೆ. ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಡೈನಮೇಟ್ ಬಳಸಿ ನಿಧಿ ಶೋಧನೆಗೆ ಮುಂದಾದ ಆರೋಪಿಗಳನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯವಾಗಿದೆ.