ಬಳ್ಳಾರಿ: ಕೊಟ್ಟೂರು ಸ್ವಾಮಿ ಮಠದ ಡಾ. ಸಂಗನಬಸವ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಕಳೆದ ಹಲವು ದಿನಗಳಿಂದ ವಯೋಸಹ ಕಾಯಿಲೆಯಿಂದ ಬಳಲುತ್ತಿದ್ದ ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಸಂಗನಬಸವ ಸ್ವಾಮೀಜಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ.
ಬಳ್ಲಾರಿ-ಹೊಸಪೇಟೆ ಕೊಟ್ಟೂರು ಸ್ವಾಮಿ ಮಠದ ಅಧಿಕಾರ ವಹಿಸಿಕೊಂಡನಂತರ ಡಾ.ಸಂಗನಬಸವ ಸ್ವಾಮೀಜಿಗಳು, ಸರ್ವಧರ್ಮಗಳ ಸಾಮೂಹಿಕ ವಿವಾಹ, ಹರಿಜನ-ಗಿರಿಜನ ಓಣಿಗಳಲ್ಲಿ ಪಾದಯಾತ್ರೆ, ಮನೆ ಮನೆಗೆ ಪ್ರಸಾದ ಇತ್ಯಾದಿ ಕಾರ್ಯಕ್ರಮ ಮೂಲಕ ಜನಾನುರಾಗಿಯಾಗಿದ್ದರು. 9 ಮಠಗಳಲ್ಲಿ ನಿರಂತರವಾಗಿ ಶಿವಾನುಭವಗೋಷ್ಠಿ ರೂಪಿಸಿದ್ದ ಶ್ರೀಗಳು ಹಲವಾರು ಸಮಾಜಮುಖಿ ಕೈಂಕರ್ಯಗಳ ಮೂಲಕ ಮಠ ಸಮಾಜಕ್ಕೆ ಯಾವ ರೀತಿ ಕೊಡುಗೆಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಶ್ರೀಗಳ ನಿಧನಕ್ಕೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.