ಯಲಹಂಕ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಶತಸಿದ್ದ, ಅದರ ಭಾಗವಾಗಿ ವಿಧಾನಸೌಧಕ್ಕೆ ಬರೋರು ಯಾರು ಎಂಬುದು ನೀವೇ ತಿರ್ಮಾನ ಮಾಡಿಕೊಳ್ಳಿ, ನಾನು ನೀನು ಎಂದು ಕಿತ್ತಾಡ್ತಾ, ಒಬ್ಬರ ಕಾಲು ಮತ್ತೊಬ್ಬರು ಎಳೀತಾ ಇದ್ರೆ ಇಬ್ಬರಿಗೂ ಅಧಿಕಾರ ಇಲ್ದೆ ವಿಧಾನಸೌಧದ ಹೊರಗಡೆ ನಿಲ್ಲೋ ಪರಿಸ್ಥಿತಿ ಇಬ್ರಿಗೂ ಬರುತ್ತೆ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಕೃಷ್ಣಾ ಬೈರೇಗೌಡ ಕಿವಿಮಾತು ಹೇಳಿದ್ದಾರೆ.
ಯಲಹಂಕ ಖಾಸಗಿ ಹೋಟೆಲ್ ನಲ್ಲಿ ಆಯೋಜನೆ ಮಾಡಿದ್ದ ಕಾರ್ಯಕಾರಣಿ ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಮುಖಂಡರಿಗೆ ಕಿವಿ ಮಾತು ಹೇಳಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ನಾವು ರಾಜ್ಯದಲ್ಲಿ 33%ಕ್ಕಿಂತ ಕಡಿಮೆ ಮತ ಪಡೆದೇ ಇಲ್ಲ, ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಅದನ್ನ ಸಮರ್ಥವಾಗಿ ನಿಭಾಯಿಸುವ ಪಡೆ ಕಟ್ಟಬೇಕಿದೆ. ನಮ್ಮಲ್ಲಿ ಮುಖಂಡರ ಕೊರತೆ ಇಲ್ಲ ಎಲ್ಲರಿಗೂ ಸಾಮರ್ಥ್ಯ ಇದೆ ಅದರ ಸದ್ಬಳಕೆ ಆಗಬೇಕಿದೆ ಎಂದು ಹೇಳಿದರು.
ನಮ್ಮ ಮುಖಂಡರು ಕಾರ್ಯಕರ್ತರಾಗಿ ಕೆಲಸ ಮಾಡಬೇಕಿದೆ. ಕೊರೊನ ಸಂದರ್ಭದಲ್ಲಿ ಮಡಿದ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವಿಗೆ ದಾವಿಸುವ ಕೆಲಸ ಮಾಡಬೇಕಿದ್ದು ಸರ್ಕಾರದ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸಲು ಇಂದಿನಿಂದಲೆ ಕಾರ್ಯಪ್ರವೃತ್ತರಾಗ ಬೇಕು ಎಂದು ಸೂಚನೆ ನೀಡಿದರು.
ಮುಖಂಡ ಗೋಪಾಲಕೃಷ್ಣ, ಯುವ ಮುಖಂಡ ಅಳ್ಳಾಳಸಂದ್ರ ಸಂತೋಷ್, ಬ್ಲಾಕ್ ಅಧ್ಯಕ್ಷರು, ಬೂತ್ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.