ದೆಹಲಿ: ಎರ್ರಾಬಿರ್ರಿ ಹೇರ್ ಕಟ್ಟಿಂಗ್ ಮಾಡಿದ ತಪ್ಪಿಗೆ ಸೆಲೂನೊಂದು ಗ್ರಾಹಕರಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಪರಿಹಾರ ನೀಡುವ ಸಂದಿಗ್ಧತೆಯಲ್ಲಿ ಸಿಲುಕಿದೆ.
ಪ್ರಕರಣದ ಸಾರಾಂಶ ಇಷ್ಟೇ..
ದೆಹಲಿಯ ಪ್ರತಿಷ್ಠಿತ ಸೆಲೂನೊಂದು ಗ್ರಾಹಕರಾಗಿ ಬಂದ ಮೋಡೆಲ್‌ನ ಹೇರ್ ಕಟ್ಟಿಂಗ್‌ನಲ್ಲಿ ಎಡವಟ್ಟು ಮಾಡಿದೆ. ವಿಎಲ್‌ಸಿಸಿ ಬ್ರಾಂಡ್‌ಗಳಿಗೆ ಮಾಡಲಿಂಗ್ ಮಾಡುತ್ತಿದ್ದ ಗ್ರಾಹಕರು, ಪ್ರತಿಷ್ಠಿತ ಸೆಲೂನ್‌ಗೆ ತೆರಳಿ ಕೇಶಕರ್ತನಕ್ಕೆ ಸೂಚಿಸಿದ್ದರು. ಸೆಲೂನ್ ಸಿಬ್ಬಂದಿ ಬಳಿ 4 ಇಂಚು ಕಟ್ ಮಾಡಲು ಸೂಚಿಸಿದರಂತೆ. ಆದರೆ ಸೆಲೂನ್ ಸಿಬ್ಬಂದಿ ಮಾಡಿದ್ದೇ ಬೇರೆ. ತುದಿಯಿಂದ ನಾಲ್ಕು ಇಂಚು ಕಟ್ ಮಾಡುವ ಬದಲು ಬುಡದಲ್ಲಿ ನಾಲ್ಕು ಇಂಚು ಬಿಟ್ಟು ಕೂದಲು ಕಟ್ ಮಾಡಿದ್ದಾರೆ.
ಆ ವರೆಗೂ ಕೂದಲೇ ಈ ಮಾಡೆಲ್‌ನ ಐಡೆಂಟಿಟಿ ಆಗಿತ್ತಂತೆ. ಆದರೆ ಸೆಲೂನ್ ಸಿಬ್ಬಂದಿಯ ಯಡವಟ್ಟಿನಿಂದಾಗಿ ತನ್ನ ಲುಕ್ ಹಾಳಾಯಿತು ಎಂಬುದು ಮಾಡೆಲಿಂಗ್ ಆರೋಪ. ಈ ವಿಚಾರ ಕುರಿತಂತೆ ಸೆಲೂನ್ ಸಿಬ್ಬಂದಿ ಜೊತೆ ಜಗಳವಾಡಿ ಬಳಿಕ, ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದಾರೆ.
ಕೂದಲು ಕಟ್ಟಿಂಗ್‌ನಲ್ಲಾಗಿರುವ ಲೋಪದಿಂದಾಗಿ ತನ್ನ ಸೌಂದರ್ಯವೇ ಕಳಚಿದೆ. ಆಫರ್‌ಗಳೂ ಇಲ್ಲವಾಗಿದೆ. ಕೆಲಸವೂ ಇಲ್ಲದಾಗಿದೆ. ಜನಪ್ರಿಯತೆಯೂ ಕುಗ್ಗಿದ್ದು ಇದಕ್ಕಾಗಿ ನಷ್ಟ ಪರಿಹಾರಕ್ಕೆ ಸೂಚಿಸಬೇಕೆಂದು ಈ ಮಾಡೆಲ್ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಈ ದೂರಿನ ಕುರಿತಂತೆ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯವು ಗುರುವಾರ ತೀರ್ಪು ಪ್ರಕಟಿಸಿದೆ. ಮೋಡೆಲ್‌ಗೆ 2 ಕೋಟಿ ರೂಪಾಯಿ ನಷ್ಟ ಪರಿಹಾರದ ಹಣವನ್ನು ಪಾವತಿಸುವಂತೆ ಸೆಲೂನ್ ಮಾಲೀಕರಿಗೆ ಆದೇಶಿಸಿದೆ.