ನವದೆಹಲಿ: ದೇಶದಲ್ಲಿ ಬೊಜ್ಜು ಸಮಸ್ಯೆಗಳನ್ನು ಎದುರಿಸಲು ಸಮೋಸಾ, ಜಿಲೇಬಿ ಮತ್ತು ಲಡ್ಡೂಗಳಂತಹ ಭಾರತೀಯ ತಿಂಡಿಗಳ ಮೇಲೆ ಆರೋಗ್ಯ ಎಚ್ಚರಿಕೆಗಳನ್ನು ಆರೋಗ್ಯ ಸಚಿವಾಲಯ ನೀಡಿದೆ ಎಂದು ಹೇಳಲಾದ ಮಾಧ್ಯಮ ವರದಿಗಳನ್ನು ಕೇಂದ್ರ ಸರ್ಕಾರ ಮಂಗಳವಾರ ನಿರಾಕರಿಸಿದೆ.
ಆರೋಗ್ಯ ಸಚಿವಾಲಯ ಹೊರಡಿಸಿದ ಆಹಾರದ ಮೇಲಿನ ಎಚ್ಚರಿಕೆ ಲೇಬಲ್‌ಗಳು “ಭಾರತೀಯ ತಿಂಡಿಗಳಿಗೆ ಅನುಗುಣವಾಗಿಲ್ಲ” ಎಂದು ಅದು ಗಮನಿಸಿದೆ.
ಕೆಲವು ಮಾಧ್ಯಮ ವರದಿಗಳು ಸಮೋಸಾ, ಜಿಲೇಬಿ ಮತ್ತು ಲಡ್ಡೂಗಳಂತಹ ಆಹಾರ ಉತ್ಪನ್ನಗಳ ಮೇಲೆ ಆರೋಗ್ಯ ಎಚ್ಚರಿಕೆಯನ್ನು ಸರ್ಕಾರ ನೀಡಿದೆ ಪ್ರಕಟಿಸಿವೆ. ಇದು ಸುಳ್ಳು ಮಾಹಿತಿಯಾಗಿದ್ದು,ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆಯು ಮಾರಾಟಗಾರರು ಮಾರಾಟ ಮಾಡುವ ಆಹಾರ ಉತ್ಪನ್ನಗಳ ಮೇಲೆ ಯಾವುದೇ ಎಚ್ಚರಿಕೆ ಲೇಬಲ್‌ಗಳನ್ನು ಹೊಂದಿಲ್ಲ ಮತ್ತು ಭಾರತೀಯ ತಿಂಡಿಗಳಿಗೆ ಸಂಬಂಧಿಸಿದಂತೆ ಅನ್ವಯವಾಗಿಲ್ಲ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಮಾಧ್ಯಮ ವರದಿಗಳು ಸಮೋಸಾ, ವಡಾ ಪಾವ್, ಕಚೋರಿ ಮತ್ತು ಜಿಲೇಬಿಯಂತಹ ಭಾರತೀಯ ತಿಂಡಿಗಳ ಮೇಲೆ ಎಚ್ಚರಿಕೆಗಳನ್ನು ಪ್ರದರ್ಶಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ಸಚಿವಾಲಯಗಳು, ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಒತ್ತಾಯಿಸಿದೆ ಎಂದು ಹೇಳಿಕೊಂಡಿದೆ. ಆದರೆ ಈ ವರದಿಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.