ಬಿಜೆಪಿ ಸರ್ಕಾರವಿದ್ದಾಗ ಕಮಲ ಪಕ್ಷದ ಆಪ್ತ.. ಇದೀಗ ಕಾಂಗ್ರೆಸ್ ಆಡಳಿತವಿರುವಾಗ ಕೈ ನಾಯಕರ ಬೆಂಬಲಿಗ. ಈ ರೀತಿ ಗುರುತಿಸಿಕೊಂಡವರಿಗೆ ಪ್ರತಿನಿದ್ಯ ಕೊಡುವ ವ್ಯವಸ್ಥೆಗೆ ರಾಜ್ಯ ಮತ್ತೆ ಸಾಕ್ಷಿಯಾದಂತಿದೆ.
ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಯಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆದಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ವಕಫ್ ಮಂಡಳಿಯ ಮುಖ್ಯಸ್ಥರಾಗಿದ್ದ ಶಾಪಿ ಸಹದಿ ಅವರನ್ನು ಕಾಂಗ್ರೆಸ್ ಸರ್ಕಾರ ಮರುನೇಮಕ ಮಾಡಿದೆ ಎಂಬ ಸುದ್ದಿ ಮುಸ್ಲಿಂ ಸಮುದಾಯದವರನ್ನೇ ಕೆರಳುವಂತೆ ಮಾಡಿದೆ. ಸರ್ಕಾರದ ನಡೆ ವಿರುದ್ದ ಪ್ರತಿಭಟನೆ ನಡೆಸಲು ವಕಫ್ ಸಂರಕ್ಷಣಾ ಸಮಿತಿ ನಿರ್ಧರಿಸಿದೆ.
#WaqfBoard @Moulanaazharhussain congratulations 🎉 Re nominated hon'ble member of #Karnataka state #board of #waqf pic.twitter.com/ERWHw7l4dg
— Abbas Raza Syed ಕನ್ನಡಿಗ JDS (@AbbasRazaSyed3) May 24, 2023
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ. ‘ಬಿಜೆಪಿಯ ಅಭ್ಯರ್ಥಿಯಂತೆ ಬಿಂಬಿತವಾಗಿದ್ದ ಶಾಪಿ ಸಹದಿ ಅವರು, ವಕಫ್ ಅಧ್ಯಕ್ಷರಾದ ನಂತರ ಅವರ ವಿರುದ್ದ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಅದಾಗಿಯೂ ಕೆಲವು ದಿನಗಳ ಹಿಂದಷ್ಟೇ ನಿಗಮ ಮಂಡಳಿಗಳ ನೇಮಕಾತಿಗಳನ್ನು ರದ್ದುಗೊಳಿಸಿದ್ದ ಸರ್ಕಾರ ಇದೀಗ, ವಕಫ್ ಮಂಡಳಿ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಿದ್ದಾದರೂ ಏಕೆ ಎಂದು ಮುಸ್ಲಿಂ ಮುಖಂಡರು ಪ್ರಶ್ನಿಸಿದ್ದಾರೆ. ಇದರ ವಿರುದ್ದ ವಕಫ್ ಸಂರಕ್ಷಣಾ ಕ್ರಿಯಾ ಸಮಿತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಪ್ರಮುಖರು ತಿಳಿಸಿದ್ದಾರೆ.
The Waqf board chief, Maulana Shafi Saadi is a BJP-backed member, so it’s his duty to support BJP. pic.twitter.com/iZQi30qAIi
— Saleem Sarang (@Sarangsspeaks) May 15, 2023