ದೆಹಲಿ: ಕರ್ನಾಟಕದಲ್ಲಿ ‘ಕಾಂಗ್ರೆಸ್ ಈವರೆಗೆ ಪ್ರತಿಪಕ್ಷ, ಇನ್ನು ಮುಂದೆ ಆಡಳಿತ ಪಕ್ಷ’ ಎಂಬ ಸೂತ್ರಕ್ಕೆ ಒಗ್ಗಿ ಚುನಾವಣಾ ಅಖಾಡದಲ್ಲಿ ಸೆಣಸಾಡಲು ಕೈ ನಾಯಕರಿಗೆ ವರಿಷ್ಠರು ಮಾರ್ಗದರ್ಶನ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಂಬಂಧ ದಿಲ್ಕಿಯಲ್ಲಿ ಕಸರತ್ತು ನಡೆಸುತ್ತಿರುವ ವರಿಷ್ಠರು ಸಮರ್ಥ ಹುರಿಯಾಳುಗಳ ಆಯ್ಕೆಗಾಗಿ ಸರ್ಕಸ್‌ನಲ್ಲಿ ತೊಡಗಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುಜೇವಾಲ, ಕೆ.ಸಿ.ವೇಣುಗೋಪಾಲ್ ಸಹಿತ ಪ್ರಮುಖರ ಉಪಸ್ಥಿತಿಯಲ್ಲಿ ಶುಕ್ರವಾರ ನಡೆದ ಸಭೆ ಕುತೂಹಲದ ಕೇಂದ್ರಬಿಂದುವಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಕೂಡಾ ಈ ಸಭೆಯಲ್ಲಿ ಉಪಸ್ಥಿತರಿದ್ದು ಕಾರ್ಯತಂತ್ರದಲ್ಲಿ ಭಾಗಿಯಾದರು.
ಈ ಬಾರಿಯ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಹತ್ವದ್ದಾಗಿದ್ದು, ಟಿಕೆಟ್ ನೀಡುವಾಗ ಯುವಕರಿಗೆ ಆದ್ಯತೆ ನೀಡುವ ಬಗ್ಗೆ ಸಲಹೆ ವ್ಯಕ್ತವಾಯಿತು. ಆದರೆ ಸಮುದಾಯವನ್ನು ಪರಿಗಣಿಸಬೇಕು, ಗೆಲ್ಲುವ ಸಮೂಹಗಳನ್ನು ಕಡೆಗಣಿಸಬಾರದೆಂಬ ವಿಚಾರಗತ್ತಲೂ ಗಮನಕೇಂದ್ರೀಕರಿಸಲಾಗಿತ್ತು. ಅಷ್ಟೇ ಅಲ್ಲ, ತಮ್ಮದೇ ಆದ ಚಾಪು ಮೂಡಿಸಿರುವ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಅವರ ಹೆಸರುಗಳನ್ನೂ ಅಂತಿಮಗೊಳೊಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರ ಹೆಸರನ್ನು ಕೋಲಾರ ಕ್ಷೇತ್ರಕ್ಕೆ ಗುರುತಿಸಲಾಗಿದೆಯಾದರೂ ಬೆಳವಣಿಗೆಯನ್ಬಾಧರಿಸಿ ಅಂತಿಮ ಹಂತದಲ್ಲಿ ಬದಲಾಯಿಸಲು ತೀರ್ಮಾನಿಸಲಾಗಿದೆ. ಹಾಗಾಗಿ ಚಾಮರಾಜಪೇಟೆಗೆ ಹಾಲಿ ಶಾಕ ಜಮೀರ್ ಹೆಸರನ್ನು ಅಂತಮಗೊಳಿಸದಿರುವುದು ಅಚ್ಚರಿಗೆ ಕಾರಣವಾಗಿದೆ.
ಮೊದಲ ಪಟ್ಟಿಯಲ್ಲಿನ ಸಂಭವನೀಯ ಅಭ್ಯರ್ಥಿಗಳು:
- ಕನಕಪುರ – ಡಿ.ಕೆ.ಶಿವಕುಮಾರ್,
- ಕೊರಟಗೆರೆ – ಡಾ.ಜಿ.ಪರಮೇಶ್ವರ್,
- ಬಬಲೇಶ್ವರ – ಎಂ.ಬಿ.ಪಾಟೀಲ್,
- ಬಿಟಿಎಂ ಲೇ ಔಟ್- ರಾಮಲಿಂಗಾರೆಡ್ಡಿ,
- ಚಿತ್ತಾಪುರ – ಪ್ರಿಯಾಂಕ್ ಖರ್ಗೆ,
- ಯಮಕನಮರಡಿ- ಸತೀಶ್ ಜಾರಕಿಹೊಳಿ-
- ಭಾಲ್ಕಿ- ಈಶ್ವರ್ ಖಂಡ್ರೆ
- ಹಳಿಯಾಳ – ಆರ್.ವಿ.ದೇಶಪಾಂಡೆ-
- ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕರಪ್ಪ,
- ಗದಗ – ಎಚ್.ಕೆ.ಪಾಟೀಲ್,
- ಶ್ರೀನಿವಾಸಪುರ – ರಮೇಶ್‌ಕುಮಾರ್,
- ಸರ್ವಜ್ಞನಗರ – ಕೆ.ಜೆ.ಜಾರ್ಜ್,
- ಶಾಂತಿನಗರ – ಎನ್.ಎ.ಹ್ಯಾರೀಸ್,
- ಬ್ಯಾಟರಾಯನಪುರ – ಕೃಷ್ಣ ಬೈರೇಗೌಡ,
- ಚಿಕ್ಕೋಡಿ-ಸದಲಗ – ಗಣೇಶ್ ಪ್ರಕಾಶ್ ಹುಕ್ಕೇರಿ,
- ಬೆಳಗಾವಿ ಗ್ರಾಮಾಂತರ – ಲಕ್ಷ್ಮಿ ಹೆಬ್ಟಾಳ್ಕರ್,
- ಖಾನಾಪುರ – ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್,
- ಬೈಲಹೊಂಗಲ – ಕೌಜಲಗಿ ಮಹಾಂತೇಶ್ ಶಿವಾನಂದ್,
- ಜಮಖಂಡಿ – ಆನಂದ್ ನ್ಯಾಮಗೌಡ,
- ಬಸವನಬಾಗೇವಾಡಿ – ಶಿವಾನಂದ ಪಾಟೀಲ್,
- ಜೇವರ್ಗಿ – ಅಜಯ್ ಧರ್ಮಸಿಂಗ್,
- ಶಹಾಪುರ – ಶರಣ ಬಸಪ್ಪ ದರ್ಶನಾಪುರ್,
- ಹುಮ್ನಾಬಾದ್ – ರಾಜಶೇಖರ್ ಪಾಟೀಲ್,
- ಬೀದರ್ – ರಹೀಂ ಖಾನ್,
- ರಾಯಚೂರು ಗ್ರಾಮಾಂತರ – ಬಸನಗೌಡ ದದ್ದಲ್,
- ಮಸ್ಕಿ – ಬಸನಗೌಡ ತುರವಿಹಾಳ್,
- ಕುಷ್ಟಗಿ – ಅಮರೇಗೌಡ ಬಯ್ಯಾಪುರ,
- ಕೊಪ್ಪಳ- ರಾಘವೇಂದ್ರ ಹಿಟ್ನಾಳ್,
- ಹುಬ್ಬಳ್ಳಿ -ಧಾರವಾಡ ಪೂರ್ವ – ಅಬ್ಬಯ್ಯ ಪ್ರಸಾದ್,
- ಹಾನಗಲ್- ಶ್ರೀನಿವಾಸ ಮಾನೆ,
- ಹಡಗಲಿ – ಟಿ.ಪಿ.ಪರಮೇಶ್ವರ್ ನಾಯ್ಕ,
- ಹಗರಿ ಬೊಮ್ಮನಹಳ್ಳಿ- ಭೀಮಾ ನಾಯ್ಕ,
- ಕಂಪ್ಲಿ- ಜಿ.ಎನ್.ಗಣೇಶ್,
- ಬಳ್ಳಾರಿ – ಬಿ.ನಾಗೇಂದ್ರ,
- ಸಂಡೂರು – ತುಕಾರಾಂ,
- ಚಳ್ಳಕೆರೆ – ಟಿ.ರಘುಮೂರ್ತಿ,
- ಭದ್ರಾವತಿ – ಬಿ.ಕೆ.ಸಂಗಮೇಶ್,
- ಶೃಂಗೇರಿ – ಟಿ.ಡಿ.ರಾಜೇಗೌಡ,
- ಕುಣಿಗಲ್ – ಎಚ್.ಡಿ.ರಂಗನಾಥ್,
- ಗೌರಿಬಿದನೂರು- ಶಿವಶಂಕರರೆಡ್ಡಿ,
- ಬಾಗೇಪಲ್ಲಿ – ಎಸ್.ಎಸ್.ಸುಬ್ಬಾ ರೆಡ್ಡಿ,
- ಕೆಜಿಎಫ್- ರೂಪಕಲಾ
- ಬಂಗಾರಪೇಟೆ – ನಾರಾಯಣಸ್ವಾಮಿ,
- ಮಾಲೂರು – ನಂಜೇಗೌಡ
- ಮಂಗಳೂರು- ಯು.ಟಿ.ಖಾದರ್,
- ಹೆಬ್ಟಾಳ – ಬೈರತಿ ಸುರೇಶ್,
- ಪುಲಕೇಶಿನಗರ – ಅಖಂಡ ಶ್ರೀನಿವಾಸಮೂರ್ತಿ,
- ಶಿವಾಜಿನಗರ – ರಿಜ್ವಾನ್ ಅರ್ಷದ್,
- ಜಯನಗರ – ಸೌಮ್ಯರೆಡ್ಡಿ,
- ಆನೇಕಲ್ – ಶಿವಣ್ಣ,
- ಹೊಸಕೋಟೆ – ಶರತ್ ಬಚ್ಚೇಗೌಡ,
- ದೊಡ್ಡಬಳ್ಳಾಪುರ – ಟಿ.ವೆಂಕಟರಮಣಯ್ಯ,
- ಹುಣಸೂರು – ಎಚ್.ಪಿ.ಮಂಜುನಾಥ್,
- ಎಚ್.ಡಿ.ಕೋಟೆ – ಅನಿಲ್ ಚಿಕ್ಕಮಾದು,
- ವರುಣಾ – ಯತೀಂದ್ರ ಸಿದ್ದರಾಮಯ್ಯ,
- ಚಾಮರಾಜನಗರ – ಸಿ.ಪುಟ್ಟರಂಗಶೆಟ್ಟಿ.