ಬೆಂಗಳೂರು: ಕರ್ನಟಕದಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಶೇಕಡಾ ಶೇ.69.56ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ದೇಶದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನವಾಗಿದ್ದು, ರಾಜ್ಯದಲ್ಲಿ ಇದು ಮೊದಲ ಹಂತ. ರಾಜ್ಯದ 14 ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆದಿತ್ತು. ಕೆಲವು ಕ್ಷೇತ್ರಗಳಲ್ಲಿ ತಾಂತ್ರಿಕ ದೋಷ ಮತ್ತು ಮತದಾನ ಬಹಿಷ್ಕಾರದಂತಹ ಘಟನೆಗಳ ನಡುವೆ ಅವಧಿ ಮುಕ್ತಾಯದ ಬಳಿಕವೂ ಮತದಾನವಾಗಿದೆ. ಹಲವು ಮತಗಟ್ಟೆಗಳಲ್ಲಿ ಸಂಜೆ 7 ಗಂಟೆಯವರೆಗೂ ಮತದಾನ ನಡೆದಿತ್ತು. ಹಾಗಾಗಿ ಮತದಾನದ ಪ್ರಮಾಣದ ಬಗ್ಗೆ ಶನಿವಾರ ಸ್ಪಷ್ಟ ಮಾಹಿತಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ಮತದಾನದ ಪ್ರಮಾಣ:
-
ಮಂಡ್ಯ : 81.67%
-
ತುಮಕೂರು : 78.05%
-
ಕೋಲಾರ : 78.27%
-
ಹಾಸನ : 77.68%
-
ದಕ್ಷಿಣ ಕನ್ನಡ : 77.56%
-
ಉಡುಪಿ-ಚಿಕ್ಕಮಗಳೂರು: 77.15%
-
ಚಿಕ್ಕಬಳ್ಳಾಪುರ : 77%
-
ಚಾಮರಾಜನಗರ : 76.81%
-
ಚಿತ್ರದುರ್ಗ : 73.30
-
ಮೈಸೂರು-ಕೊಡಗು : 70.62%
-
ಬೆಂಗಳೂರು ಗ್ರಾಮಾಂತರ : 68.30%
-
ಬೆಂಗಳೂರು ಉತ್ತರ : 54.45%
-
ಬೆಂಗಳೂರು ಸೆಂಟ್ರಲ್ : 54.06 %
-
ಬೆಂಗಳೂರು ದಕ್ಷಿಣ : 53.17%