ಬೆಂಗಳೂರು. ಅಸಹ್ಯ ಹಾಗೂ ನೋಡುಗರನ್ನು ಬೆಚ್ಚಿ ಬೀಳಿಸುವ ವೀಡಿಯೋ. ಯುವತಿಯೊಬ್ಬಳ ಮೇಲೆ ಬಾಂಗ್ಲಾದೇಶ ಮೂಲದ ಕೇಡಿಗಳೆನ್ನಲಾದ ಗುಂಪು ನಡೆಸಿರುವ ಬರ್ಬರ ಲೈಂಗಿಕ ದೌರ್ಜನ್ಯದ ವೀಡಿಯೋ ನಿರ್ಭಯಾ ಪ್ರಕರಣ ಸಂದರ್ಭದ ರೀತಿಯಲ್ಲೇ ಆಕ್ರೋಶದ ಕಿಚ್ಚು ಹಚ್ಚಿದೆ.
ಏನಿದು ವೀಡಿಯೋ..?
ನಿರ್ಭಯ ಪ್ರಕರಣ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಅದೇ ರೀತಿ ಇದೀಗ ಮತ್ತೊಬ್ಬಳು ಯುವತಿ ಮೇಲೆ ಕಾಮಾಂಧರು ಕೀಚಕ ಕೃತ್ಯ ಎಸಗಿದ್ದಾರೆ. ಬಾಂಗ್ಲಾ ದೇಶದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಯುವಕರ ಗುಂಪು ಮಹಿಳೆಯರ ಜೊತೆ ಸೇರಿ ಈ ಘೋರ ಕೃತ್ಯ ಎಸಗಿದ್ದು, ಇದನ್ನು ಅವರೇ ವೀಡಿಯೋ ಮಾಡಿದ್ದಾರೆ.
ಈ ವೀಡಿಯೋ ಬಾಂಗ್ಲಾದೇಶ ಸಹಿತ ಹಲವೆಡೆ ವೈರಲ್ ಆಗಿದೆ. ಆದರೆ ಈ ಕೀಚಕ ಕೃತ್ಯ ಎಲ್ಲಿ ನಡೆದಿರುವುದು ಎಂಬ ಸ್ಪಷ್ಟತೆ ಇರಲಿಲ್ಲ. ಅದಾಗಲೇ ಜೋದ್ಪುರದಲ್ಲಿ ನಾಗಾಲ್ಯಾಂಡ್ ಮೂಲದ ಯುವತಿಯೊಬ್ಬಳ ಆತ್ಮಹತ್ಯೆ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಮಹಿಳೆಯೊಬ್ಬಳು ಪೊಲೀಸರಿಗೆ ಶರಣಾಗಿದ್ದಳೆನ್ನಲಾಗಿದೆ. ಈ ವೀಡಿಯೋದಲ್ಲಿದ್ದ ಸಂತ್ರಸ್ತೆಯೇ ಸಾವಿಗೀಡಾಗಿರಬಹುದೆಂಬ ಅನುಮಾನ ಉಂಟಾಗಿತ್ತು.
ಅದಾಗಲೇ ಟ್ವೀಟ್ ಮಾಡಿದ್ದ ಕೇಂದ್ರಸಚಿವ ಕಿರಣ್ ರಿಜಿಜು, ಈ ವೀಡಿಯೋ ಹಾಗೂ ಜೋದ್ಪುರ ಘಟನೆಗೂ ಸಂಬಂಧವಿಲ್ಲ. ಅದಾಗಿಯೂ ಕೀಚಕ ಕೃತ್ಯ ಎಸಗಿರುವವರನ್ನು ಬಂಧಿಸಬೇಕು ಎಂದು ಪ್ರತಿಪಾದಿಸಿದ್ದರು.
The viral video of a girl from North-East being brutally raped and tortured by 4 men & 1 women is not related to Jodhpur suicide case. I had detail discussion with the Police Commisioner of Jodhpur.
However, there must be all out efforts by all State Police to catch the devils.— Kiren Rijiju (मोदी का परिवार) (@KirenRijiju) May 26, 2021
ಕೇಂದ್ರ ಸಚಿವರ ಈ ಟ್ವೀಟ್ ಬೆನ್ನಲ್ಲೇ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕೆಂಬ ಒತ್ತಾಯ ದೇಶವ್ಯಾಪಿ ಕೇಳಿಬಂದಿದೆ. ಈ ವೀಡಿಯೋ ಬಗ್ಗೆ ದೇಶದ ವಿವಿಧ ರಾಜ್ಯಗಳ ಪೊಲೀಸರು ಪರಿಶೀಲನೆ ನಡೆಸಿದರು.
ಅದೇ ಹೊತ್ತಿಗಾಗಲೇ ಬೆಂಗಳೂರು ಪೊಲೀಸರು ಕೂಡಾ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿದರು. ವೀಡಿಯೋದಲ್ಲಿನ ಕಾಮುಕರ ಫೊಟೋ ಸ್ಕೆಚ್ ಸಿದ್ದಪಡಿಸಿ, ಹೆಜ್ಜೆ ಜಾಡು ಬೆನ್ನತ್ತಿದ ಪೊಲೀಸರು, ಈ ಕೀಚಕಪಡೆಯು ಬೆಂಗಳೂರಿನ ಅವಲಹಳ್ಳಿ ಬಳಿ ವಾಸವಿದ್ದ ಸಂಗತಿಯನ್ನೂ ಪತ್ತೆಮಾಡಿದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ರಾಮಮೂರ್ತಿನಗರ ಠಾಣೆಯ ಪೊಲೀಸರು, ನಾಲ್ವರನ್ನು ಬೇಟೆಯಾಡಿ ಕೃತ್ಯದ ಹಿಂದಿನ ರಹಸ್ಯವನ್ನು ಬೇಧಿಸಿದ್ದಾರೆ. ಮಹಮ್ಮದ್ ಬಾಬಾ ಶೇಕ್, ಸಾಗರ್, ಹಕೀಲ್ ಹಾಗೂ ಮಹಿಳೆಯರನ್ನು ಬಂಧಿಸಿದ್ದು ಇನ್ನುಳಿದವರಿಗಾಗಿ ಶೋಧ ಕೈಗೊಂಡಿದ್ದಾರೆ.
ಸಂತ್ರಸ್ತೆ ಸುಮಾರು 22 ವರ್ಷ ಹರೆಯದವಳಾಗಿದ್ದು ಹಣಕಾಸಿನ ವಿಚಾರದಲ್ಲಿ ನಡೆದಿರಬಹುದೆನ್ನಲಾದ ಈ ಕೃತ್ಯದಲ್ಲಿ ಮಹಿಳೆಯರೂ ಸಾಥ್ ನೀಡಿದ್ದರು. ಅಷ್ಟೇ ಅಲ್ಲ, ಬಾಂಗ್ಲಾದೇಶ ಮೂಲದ ಈ ಪುಂಡರು ಹಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು ಆಧಾರ್ ಕಾರ್ಡ್ ಸಹಿತ ಹಲವು ದಾಖಲೆಗಳನ್ನು ಹೊಂದಿದ್ದಾರೆನ್ನಲಾಗಿದೆ.