ಮಂಗಳೂರು: ಮಂಗಳೂರಿನ ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ವತಿಯಿಂದ ಸಂಗೀತ ವಿದುಷಿ ವಿಭಾ ಶ್ರೀನಿವಾಸ್ ನಾಯಕ್ ಅವರ ಸಂಗೀತ ಸುಧೆಯ ‘ರಂಗಾ ನಿನ್ನ’.. ಭಕ್ತಿ ಗೀತೆಗಳ ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಆ.30ರಂದು ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಲಿದೆ.
ಮಂಗಳೂರು ಪೊಲೀಸ್ ಆಯುಕ್ತರಾದ ಶಶಿ ಕುಮಾರ್ ಆಲ್ಬಂ ಬಿಡುಗಡೆ ಮಾಡಲಿದ್ದಾರೆ. ಬೈಕಂಪಾಡಿಯ ಅನಘ ರಿಫೈನರೀಸ್ ಇದರ ಆಡಳಿತ ನಿರ್ದೇಶಕ ಸಾಂಬ ಶಿವರಾವ್, ಮಂಗಳೂರಿನ ಡಿಂಕಿ ಡೈನ್ ಇದರ ಆಡಳಿತ ನಿರ್ದೇಶಕರಾದ ಸ್ವರ್ಣ ಸುಂದರ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ನ ಪ್ರಕಟಣೆ ತಿಳಿಸಿದೆ.
























































