ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ಇಲಾಖೆಯಲ್ಲಿನ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಅನಾವರಣವಾಗಿದೆ. ಈ ಕುರಿತಂತೆ ಪ್ರತಿಪಕ್ಷಗಳು ಹೇಳಿಕೊಂಡಿದ್ದರೆ ಅದನ್ನು ರಾಜಕೀಯ ಆರೋಪ ಎಂದು ಬಣ್ಣಿಸಬಹುದಾಗಿತ್ತು. ಆದರೆ ಈ ಬಗ್ಗೆ ಸ್ಫೋಟಕ ಗುರುತರ ಆರೋಪ ಮಾಡಿರುವುದು ಸ್ವತಃ ಬಿಜೆಪಿ ಶಾಸಕರೇ.
ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆಯ ಸಚಿವರಾಗಿರುವವರು ಡಾ.ಅಶ್ವತ್ಥನಾರಾಯಣ್. ಪಿಎಸ್ಐ ಹಗರಣ, ನೇಮಕಾತಿ ಹಗರಣ, ಸಹಿತ ಹಲವಾರು ಕರ್ಮಕಾಂಡಗಳು ಬಯಲಾದ ಸಂದರ್ಭಗಳಲ್ಲಿ ಪ್ರತಿಪಕ್ಷಗಳು ಸಚಿವ ಅಶ್ವತ್ಥನಾರಾಯಣ್ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದವು. ಇದೀಗ ಆಡಳಿತ ಪಕ್ಷದ್ದೇ ಶಾಸಕ ಹೆಚ್.ವಿಶ್ವನಾಥ್ ಅವರು ಬಹಿರಂಗಪಡಿಸಿರುವ ಮಾಹಿತಿಯು, ಇದೇ ಅಶ್ವತ್ಥನಾರಾಯಣ್ ಅವರು ಸಚಿವರಾಗಿರುವ ಇಲಾಖೆಯ ಕಾರ್ಯವೈಖರಿ ಬಗ್ಗೆ ಅನುಮಾನ ಹೆಚ್ಚಾಗುಂತೆ ಮಾಡಿದೆ.
ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳು 5, 6 ಕೋಟಿ ಕೊಟ್ಟು ಬಂದಿದ್ದಾರೆ ಎಂಬುದು ವಿಧಾನ ಪರಿಷತ್ ಸದಸ್ಯ ಹೆಚ್ಚವಿಶ್ವನಾಥ್ ಅವರು ಬಯಲು ಮಾಡಿರುವ ಸಂಗತಿ. ಅವರ ಈ ಹೇಳಿಕೆಯನ್ನೇ ಅಸ್ತ್ರವಾಗಿಸಿರುವ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ‘ಬಿಜೆಪಿ ಆಡಳಿತದಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಗಳ ವ್ಯವಸ್ಥೆ ಬುಡಮೇಲಾಗಿದೆ ಎಂದು ಅವರದ್ದೇ ಪಕ್ಷದ ನಾಯಕರು ಹೇಳ್ತಿದಾರೆ. ವೈಸ್ ಚಾನ್ಸಲರ್ ಹುದ್ದೆಗೆ 5,6 ಕೋಟಿ ಕೊಟ್ಟು ಬಂದಿದ್ದಾರೆ ಎನ್ನುವ ಮೂಲಕ ಸಚಿವ ಅಶ್ವತ್ಥನಾರಾಯಣ್ ಅವರ ಭ್ರಷ್ಟಾಚಾರವನ್ನು ಬಯಲಿಗಿಟ್ಟಿದ್ದಾರೆ. ನಿಮ್ಮವರದ್ದೇ ಈ ಆರೋಪದ ಬಗ್ಗೆ ತನಿಖೆ ಯಾವಾಗ?’ ಎಂದು ಸಿಎಂ ಬಸವರಾಜ್ ಬೊಮ್ಮಾಯಿಯವರನ್ನು ಕೇಳಿದೆ.
ಬಿಜೆಪಿ ಆಡಳಿತದಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಗಳ ವ್ಯವಸ್ಥೆ ಬುಡಮೇಲಾಗಿದೆ ಎಂದು ಅವರದ್ದೇ ಪಕ್ಷದ ನಾಯಕರು ಹೇಳ್ತಿದಾರೆ.
ವೈಸ್ ಚಾನ್ಸಲರ್ ಹುದ್ದೆಗೆ 5,6 ಕೋಟಿ ಕೊಟ್ಟು ಬಂದಿದ್ದಾರೆ ಎನ್ನುವ ಮೂಲಕ ಸಚಿವ @drashwathcn ಅವರ ಭ್ರಷ್ಟಾಚಾರವನ್ನು ಬಯಲಿಗಿಟ್ಟಿದ್ದಾರೆ.@BSBommai ಅವರೇ, ನಿಮ್ಮವರದ್ದೇ ಈ ಆರೋಪದ ಬಗ್ಗೆ ತನಿಖೆ ಯಾವಾಗ? pic.twitter.com/Czwa41IIzT
— Karnataka Congress (@INCKarnataka) November 27, 2022























































