ದೇವಸ್ಥಾನಗಳ ಹಣ ಬೇರೆ ಇಲಾಖೆಗಳ ವೆಚ್ಚಗಳಿಗೆ ಬಳಕೆಯಾಗುತ್ತಿದೆಯೇ? ಇಂತಹ ಪ್ರಶ್ನೆಗಳಿಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲ, ದೇಗುಲಗಳ ಹುಂಡಿಯಲ್ಲಿ ಸಂಗ್ರಹವಾಗುವ ಹಣ ಆಯಾ ದೇವಸ್ಥಾನಕ್ಕೆ ಬಳಸಬೇಕು ಎಂದು ಮಂತ್ರಿ ಹೊರೆಯಾಡಿಸಿರುವ ಫರ್ಮಾನು ಕೂಡಾ ಗಮನಸೆಳೆದಿದೆ. ಸಚಿವರ ಈ ನಡೆಯನ್ನು ಆಸ್ತಿಕರು ಸ್ವಾಗತಿಸಿದ್ದಾರೆ.
ಧಾರವಾಡ: ದೇವಸ್ಥಾನಗಳ ಹಣ ಬೇರೆ ಇಲಾಖೆಗಳ ವೆಚ್ಚಗಳಿಗೆ ಬಳಕೆಯಾಗುತ್ತಿವೇ ಎಂಬ ಅನುಮಾನಗಳ ಬಗ್ಗೆ ಚರ್ಚೆ ಸಾಗಿರುವಂತೆಯೇ ಮುಜರಾಯಿ ಸಚಿವ ಸಚಿವ ರಾಮಲಿಂಗಾ ರೆಡ್ಡಿಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ದೇವಸ್ಥಾನಗಳ ಹುಂಡಿಯಲ್ಲಿ ಸಂಗ್ರಹವಾಗುವ ಹಣ ಆಯಾ ದೇವಸ್ಥಾನಕ್ಕೆ ಬಳಸಬೇಕು ಎಂದು ಅವರು ಹೇಳಿದ್ದಾರೆ. ಧಾರವಾಡದ ನೂತನ ಸಿಬಿಟಿ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ತಮ್ಮ ಇಲಾಖೆಯ ಪ್ರಗತಿಯ ಮುನ್ನೋಟಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಸಚಿವ ರಾಮಲಿಂಗ ರೆಡ್ಡಿ, ಶಕ್ತಿ ಯೋಜನೆಯಿಂದ ದೇವಸ್ಥಾನಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ ಎಂದರು. ಮುಜರಾಯಿ ಇಲಾಖೆ ಅಡಿಯಲ್ಲಿ 34 ಸಾವಿರ ದೇವಸ್ಥಾನಗಳಿದ್ದು, ದೇವಸ್ಥಾನಗಳ ಹುಂಡಿಯಲ್ಲಿ ಸಂಗ್ರಹವಾಗುವ ಹಣವನ್ನು ಮತ್ತೊಂದು ದೇವಸ್ಥಾನಕ್ಕೆ ಬಳಸುವುದಿಲ್ಲ. ಆಯಾ ದೇವಸ್ಥಾನದ ಹುಂಡಿ ಹಣ ಅದೇ ದೇವಸ್ಥಾನಕ್ಕೆ ಸೇರುತ್ತದೆ ಎಂದರು.
ಬಸ್ ಖರೀದಿಗೆ ಕ್ರಮ..!
ಸಾರಿಗೆ ಇಲಾಖೆಯಲ್ಲೂ ಮಹತ್ವದ ಸಾಧನೆ ಮಾಡಲಾಗಿದೆ. ಪ್ರಮುಖವಾಗಿ ಶಕ್ತಿ ಯೋಜನೆ ಜನರಿಗೂ ಅನುಕೂಲವಾಗಿದೆ ಎಂದ ಅವರು, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಮುನ್ನ ಪ್ರತಿದಿನ 80 ಲಕ್ಷ ಜನ ಓಡಾಡುತ್ತಿದ್ದರು. ‘ಶಕ್ತಿ’ ಜಾರಿಯ ನಂತರ ಪ್ರತಿದಿನ ಓಡಾಡುವವರ ಸಂಖ್ಯೆ 1 ಕೋಟಿಗೂ ಹೆಚ್ಚಾಗಿದೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಯಾಗಿದ್ದು, ಹೊಸ ಬಸ್ ಖರೀದಿ ನಂತರ ಎಲ್ಲ ಸಮಸ್ಯೆ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.