ದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಜಯಭೇರಿ ಭಾರಿಸಿದೆ. ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾದರೆ ಕಾಂಗ್ರೆಸ್‌ಗೆ ಅಸ್ತಿತ್ವ ಉಳಿಸಿಕೊಳ್ಳುವ ಸವಾಲೆನಿಸಿತ್ತು. ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿರುವ ಈ ಮಿನಿಮಹಾ ಸಮರದಲ್ಲಿ ಬಿಜೆಪಿಯೇ ಮುಂಚೂಣಿ ಸಾಧಿಸಿ, ಗೆಲುವಿನ ನಗೆ ಬೀರಿದೆ.
ತೀವ್ರ ಕೌತುಕದ ಅಖಾಡವೆನಿಸಿದ್ದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಸಾರಥ್ಯದ ಬಿಜೆಪಿ ಪರಾಕ್ರಮ ಮೆರೆದಿದೆ. ಮತ ಎಣಿಕೆಯುದ್ದಕ್ಕೂ ತೀವ್ರ ಕುತೂಹಲಕಾರಿ ಸನ್ನಿವೇಶವೇ ವ್ಯಕ್ತವಾಗಿದ್ದು ಬಿಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದ್ದರಿಂದ ಕಮಲ ಕಾರ್ಯಕರ್ತರಲ್ಲಿ ಸಂತಸ ಮನೆಮಾಡಿತ್ತು. ಮತಗಟ್ಟೆ ಸಮೀಕ್ಷೆಯ ಫಲಿತಾಂಶಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆದ್ದಿರುವುದು ಅಚ್ಚರಿಯ ಸಂಗತಿ.
ಈ ನಡುವೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ ವರ್ಚಸ್ಸು ಬಗ್ಗೆಯೂ ಜನರಿಗೆ ಕುತೂಹಲವಿತ್ತು. ಇದೀಗ ಅವರ ಪ್ರಭಾವವೂ ಉತ್ತರಪ್ರದೇಶದಲ್ಲಿ ಪರಿಣಾಮ ಬೀರಿಲ್ಲ ಎಂಬುದು ಈ ಫಲಿತಾಂಶದಿಂದ ಗೊತ್ತಾಗಿದೆ.
ಉತ್ತರಪ್ರದೇಶ: ಬಲಾಬಲ ಹೀಗಿದೆ.
- ಒಟ್ಟು ಸ್ಥಾನಗಳು : 403
- ಮ್ಯಾಜಿಕ್ ಸಂಖ್ಯೆ: 202
- BJP : 269
- SP : 129
- BSP: 1
- CONG: 2
- OTHERS: 2