ಉಡುಪಿ; ಕರಾವಳಿಯಲ್ಲಿ ಕಾರು-ಲಾರಿ ನಡುವೆ ಸಂಭವಿಸಿದ ಅಪಘಾತದ ದೃಶ್ಯ ಭಯಾನಕವಾಗಿದೆ. ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಕಾರನ್ನು ಕಿಲೋಮೀಟರ್ಗಟ್ಟಲೆ ದೂರ ಲಾರಿ ಎಳೆದೊಯ್ದ ಘಟನೆ ಉಡುಪಿ ಜಿಲ್ಲೆ ಪಡುಬಿದ್ರಿ ಬಳಿ ಸಂಭವಿಸಿದೆ.
ಲಾರಿಯೊಂದರ ಹಿಂದಿನಿಂದ ಸಾಗುತ್ತಿದ್ದ ಸ್ಯಾಂಟ್ರೋ ಕಾರು, ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಆ ವೇಳೆ ಕಾರು ಲಾರಿಯ ಹಿಂಬದಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಲಾರಿ ಚಲಿಸಿದಷ್ಟು ದೂರ ಕಾರನ್ನೂ ಎಳೆದೊಯ್ದಿದೆ. ಅದೇ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ಕಾರಿನಲ್ಲಿದ್ದವರು ಈ ಭಯಾನಕ ಸನ್ನಿವೇಶವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
WATCH: In a bizarre incident, the driver of a tipper truck drove the vehicle for about 2 kms dragging a car that got stuck beneath truck’s chassis after rear-ending it in Padubidri police limits of Udupi district on July 17, Monday afternoon. pic.twitter.com/eUv2XYuHS8
— Darshan Devaiah B P (@DarshanDevaiahB) July 17, 2023
ಲಾರಿ ಚಾಲಕನಿಗೆ ತನ್ನ ವಾಹನದಲ್ಲಿ ಕಾರು ಸಿಕ್ಕಿಹಾಕಿಕೊಂಡಿದ್ದ ಬಗ್ಗೆ ಗೊತ್ತಿರಲಿಲ್ಲ. ಸಮೀಪದಲ್ಲಿ ಸಂಚರಿಸುತ್ತಿದ್ದ ಬೇರೆ ಕಾರಿನಲ್ಲಿದ್ದವರು ಲಾರಿ ಚಾಲಕನ ಗಮನಕ್ಕೆ ತರುವ ಪ್ರಯತ್ನ ಮಾಡಿದರೂ ಆತ ಕ್ಯಾರೇ ಅನ್ನಲಿಲ್ಲ. ಅಂತೂ ಇಂತೂ ಸುಮಾರು ಎರಡು ಕಿಲೋ ಮೀಟರ್ ದೂರ ಕ್ರಮಿಸಿದ ನಂತರ ಲಾರಿಯನ್ನು ತಡೆದು ನಿಲ್ಲಿಸಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ನಡುವೆ, ಅಪಘಾತಕ್ಕೀಡಾದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದೇ ವೇಳೆ, ನಿರ್ಲಕ್ಷ್ಯದ ಚಾಲನೆಯ ಆರೋಪಕ್ಕೆ ಗುರಿಯಾಗಿರುವ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ.