ಉಡುಪಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಶಾಸಕ ಕೆ ರಘುಪತಿ ಭಟ್ ಅವರು ಶುಕ್ರವಾರ ಉಡುಪಿ ದೊಡ್ಡಣಗುಡ್ಡೆ ಅಂಬೇಡ್ಕರ್ ಕಾಲೊನಿ ನಿವಾಸಿ ಕಮಲಮ್ಮನ ಅವರ ಗೋ ಶಾಲೆಯಲ್ಲಿ ಗೋ ಪೂಜೆ ನೆರವೇರಿಸಿದರು.
ಗೋಪೂಜಾ ಸಂಕಲ್ಪ ವಿಧಿ ಪುರೋಹಿತ ಪದ್ಮನಾಭ ಆಚಾರ್ಯರು ನೆರವೇರಿಸಿದರು. ಬಳಿಕ ಇಲಾಖೆಯ ವತಿಯಿಂದ ಕಮಲಮ್ಮ ಮತ್ತು ಅವರ ಮಗನಿಗೆ ಹೊಸ ಬಟ್ಟೆ ಮತ್ತು ಸಹಿತಿಂಡಿಯನ್ನು ಹಾಗೂ ಹಸುಗಳಿಗೆ ಒಂದು ಕ್ವಿಂಟಾಲ್ ಹಿಂಡಿಯನ್ನು ಉಡುಗೊರೆಯಾಗಿ ನೀಡಲಾಯಿತು.
ಈ ಗೋಶಾಲೆಯ ಸುರಕ್ಷತೆಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕ ಕೆ. ರಘುಪತಿ ರವರು ಮನವಿ ಮಾಡಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಶೀಘ್ರದಲ್ಲಿ ಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ರಾಜ್ಯ ಎಸ್. ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು ದಿನಕರ ಬಾಬು, ಜಿಲ್ಲಾ ಎಸ್. ಸಿ ಮೋರ್ಚಾ ಅಧ್ಯಕ್ಷರಾದ ಗೋಪಾಲ ಕಳಂಜೆ, ಸ್ಥಳೀಯ ನಗರ ಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರಿಧರ್ ಆಚಾರ್ಯ, ಕರಂಬಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕಿಶೋರ್ ಕರಂಬಳ್ಳಿ, ಪ್ರೊ ಸದಾಶಿವ ರಾವ್, ಎಸ್ ವಿ ಭಟ್, ವಾಸುದೇವ್ ಭಟ್, ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.