ಪುತ್ತೂರು: ತುಳುನಾಡಿನ ವೈಭವದ ಹಬ್ಬದ ಸಿದ್ದತೆಯ ಸಡಗರ ನಾಡಿನ ಗಮನಸೆಳೆದಿದೆ. ನಾಡು-ನುಡಿ ವೈಭವ ಮೇಳೈಸಲು ಅಖಾಡ ಸಜ್ಜಾಗಿದೆ. ತಯಾರಿಗೂ ಇದೀಗ ಅಂತಿಮ ಸ್ಪರ್ಶ ಸಿಕ್ಕಿದ್ದು ಈ ಸಡಗರವೂ ಅವಿಸರಣೀಯ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ. ಈ ನಡುವೆ ಅನಾವರಣಗೊಂಡಿರುವ ರಾಷ್ಟ್ರೀಯ ಪತ್ರಿಕಾ ಸಮ್ಮಿಳನದ ಲಾಂಛನ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಎಪ್ರಿಲ್ 2ರಂದು ನಡೆಯಲಿರುವ ‘ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನದ’ ಲಾಂಛನ ಬಿಡುಗಡೆಯನ್ನು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಶ್ರೀಗಳು ನೆರವೇರಿಸಿದರು.
ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾದ್ವಿ ಶ್ರೀ ಮಾತಾನಂದಮಯಿ, ತುಳುಪತ್ರಿಕಾ ಸಮ್ಮಿಲನ ಸಮಿತಿ ಸಂಚಾಲಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರ ಬೈಲು, ಶಾಲಾ ಅಡಳಿತ ಮಂಡಳಿ ಅಧ್ಯಕ್ಷ ಡಾ. ಶಿವ ಪ್ರಕಾಶ್, ಸಂಚಾಲಕ ಮುರಳೀಧರ ಕೆ., ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಸುರೇಂದ್ರ ಕಿಣಿ, ಶ್ರೀಗಳ ಷಷ್ಟ್ಯಬ್ಧ ಸಮಿತಿ ಪ್ರ. ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ , ಗೀತಾ ಡ ಶೆಟ್ಟಿ, ಸುನೀತಾ ರವೀಂದ್ರ ಸತೀಶ್ ಕುಮಾರ್ ರೈ ಮುಂತಾದವರು ಉಪಸ್ಥಿತರಿದ್ದರು. ಕಲಾವಿದ ಜ್ಞಾಣೇಶ್ ವಿಶ್ವಕರ್ಮ ಈ ಲಾಂಛನ ರಚಿಸಿದ್ದಾರೆ.