ಬೆಂಗಳೂರು: ಪೆಟ್ರೋಲ್ ದರ ಏರಿಕೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಹಾಲಿನ ದರ ಏರಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ನಮ್ಮ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿಲ್ಲ. ಒಂದು ಲೀಟರ್ ಪ್ಯಾಕೇಟಿನಲ್ಲಿ ಇನ್ನುಮುಂದೆ 1,050 ಮಿಲೀ, ಅರ್ಧ ಲೀಟರ್ ಪ್ಯಾಕೇಟಿನಲ್ಲಿ 550 ಮಿಲೀ ಹಾಲು ದೊರೆಯಲಿದ್ದು, ಈ 50 ಮಿಲೀ ಹೆಚ್ಚುವರಿ ಹಾಲಿಗೆ ಗ್ರಾಹಕರಿಂದ ರೂ.2 ಸಂಗ್ರಹಿಸಲಾಗುತ್ತದೆ. ಹೀಗಾಗಿ ಲೀಟರ್ ಪ್ಯಾಕೇಟ್ ರೂ.44, ಅರ್ಧ ಲೀಟರ್ ಪ್ಯಾಕೇಟ ರೂ.24ಕ್ಕೆ ಹೆಚ್ಚು ಹಾಲಿನ ಜೊತೆ ಲಭ್ಯವಾಗಲಿದೆ’ ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಕಳೆದ ಕೆಲವು ತಿಂಗಳಿಂದ ಹಾಲಿನ ಉತ್ಪಾದನೆ ಗಣನೀಯ ಏರಿಕೆಯಾಗಿದ್ದು, ನಿತ್ಯದ ಸರಾಸರಿ ಉತ್ಪಾದನೆ 89 ಲಕ್ಷ ಲೀಟರ್ ನಿಂದ 1 ಕೋಟಿ ಲೀಟರ್ ಸಮೀಪಕ್ಕೆ ಬಂದಿದೆ ಎಂದಿರುವ ಸಿಎಂ, ಡೈರಿಗಳಲ್ಲಿ ರೈತರು ತರುವ ಹೆಚ್ಚುವರಿ ಹಾಲನ್ನು ನಿರಾಕರಿಸಬಾರದು. ಜೊತೆಗೆ ಗ್ರಾಹಕರಿಗೂ ಹೊರೆಯಾಗದ ರೀತಿ ಹಾಲನ್ನು ತಲುಪಿಸುವ ಉದ್ದೇಶದಿಂದ ಕೆ.ಎಂ.ಎಫ್ ಸಂಸ್ಥೆಯು ಈ ನಿರ್ಣಯ ಕೈಗೊಂಡಿದೆ ಎಂದಿದ್ದಾರೆ.
ಇನ್ನು ಮುಂದೆ ಹೆಚ್ಚು ಹಾಲಿನ ಜೊತೆ ಹೆಚ್ಚು ಪೋಷಕಾಂಶವು ನಂದಿನಿ ಗ್ರಾಹಕರ ಮನೆ ತಲುಪಲಿದೆ ಎಂದವರು ತಿಳಿಸಿದ್ದಾರೆ.
ನಮ್ಮ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿಲ್ಲ. ಒಂದು ಲೀಟರ್ ಪ್ಯಾಕೇಟಿನಲ್ಲಿ ಇನ್ನುಮುಂದೆ 1,050 ಮಿಲೀ, ಅರ್ಧ ಲೀಟರ್ ಪ್ಯಾಕೇಟಿನಲ್ಲಿ 550 ಮಿಲೀ ಹಾಲು ದೊರೆಯಲಿದ್ದು, ಈ 50 ಮಿಲೀ ಹೆಚ್ಚುವರಿ ಹಾಲಿಗೆ ಗ್ರಾಹಕರಿಂದ ರೂ.2 ಸಂಗ್ರಹಿಸಲಾಗುತ್ತದೆ. ಹೀಗಾಗಿ ಲೀಟರ್ ಪ್ಯಾಕೇಟ್ ರೂ.44, ಅರ್ಧ ಲೀಟರ್ ಪ್ಯಾಕೇಟ ರೂ.24ಕ್ಕೆ ಹೆಚ್ಚು ಹಾಲಿನ ಜೊತೆ… pic.twitter.com/77ti6wjxBa
— Siddaramaiah (@siddaramaiah) June 25, 2024