ದೆಹಲಿ: ಶಾಲೆಯಲ್ಲಿ ಮಕ್ಕಳು ಮಾಡುವ ಕೀಟಲೆಗಳು ಅಷ್ಟಿಷ್ಟಲ್ಲ. ಅಂತಹಾ ಮಕ್ಕಳಿಗೆ ಶಿಕ್ಷಕರು ಬೆತ್ತ ಪ್ರಹಾರ ಮಾಡಿ ಶಿಕ್ಷಿಸಿದ್ದನ್ನು ನಾವು ತಿಳಿದಿದ್ದೇವೆ. ಕೆಲವು ಸನ್ನಿವೇಶಗಳಲ್ಲಿ ಮಕ್ಕಳನ್ನು ಸಸ್ಪೆಂಡ್ ಮಾಡಿದ್ದೂ ಉಂಟು. ಆದರೆ ಇಲ್ಲೊಬ್ಬರು ಮೇಸ್ಟ್ರು ಬೇರೊಂದು ರೀತಿ ಶಿಕ್ಷೆ ನೀಡಲು ಹೋಗಿ ಬಂಧನಕ್ಕೊಳಗಾಗಿದ್ದಾರೆ.
ಈ ಪ್ರಕರಣ ನಡೆದದ್ದು ಲಕ್ನೋ ಸಮೀಪದ ಮಿರ್ಜಾಪುರದಲ್ಲಿ. ಶಾಲೆಯಲ್ಲಿ ಸಹಪಾಠಿಗೆ 2ನೇ ತರಗತಿಯ ವಿದ್ಯಾರ್ಥಿ ಸೋನು ಯಾದವ್ ಕಚ್ಚಿದ್ದನಂತೆ. ಈ ವಿದ್ಯಾರ್ಥಿಯ ಕೀಟಲೆ ಸಹಪಾಠಿಗಳನ್ನು ಹಾಗೂ ಶಿಕ್ಷಕರನ್ನು ಸಿಟ್ಟಿಗೆಬ್ಬಿಸಿತ್ತು.
ಕುಪಿತ ಮುಖ್ಯೋಪಾಧ್ಯಾಯ ಮನೋಜ್ ಅವರು ಆ ವಿದ್ಯಾರ್ಥಿಯನ್ನು ಒಂದು ಕಾಲಿನಲ್ಲಿ ಹಿಡಿದು ನೇತಾಡಿಸಿ ಶಿಕ್ಷೆ ಕೊಟ್ಟಿದ್ದಾರೆ. ಶಾಲಾ ಕಟ್ಟಡದ ಮಹಡಿಯಲ್ಲಿ ನಿಂತು ಬಾಲಕನ ಒಂದು ಕಾಲನ್ನು ಹಿಡಿದು ತಲೆಕೆಳಗಾಗಿ ನೇತಾಡಿಸಿದ್ದಾರೆ. ಅಪರಾಧಕ್ಕಾಗಿ ಕ್ಷಮೆ ಕೇಳಬೇಕು. ಇಲ್ಲದರೆ ಕೆಳಕ್ಕೆ ಬೀಳಿಸುತ್ತೇನೆ ಎಂದು ಬೆದರಿಸಿದ್ದರಂತೆ. ಇತರ ಮಕ್ಕಳು ಆ ವೇಳೆ ಮೂಕಸಾಕ್ಷಿಗಳಂತೆ ನಿಂತಿದ್ದರು.
A teacher in #Mirzapur, #UttarPradesh dangled a 2nd grader from top floor as punishment for mischievous behaviour, but strangely the boy's father has come out in support of the arrested teacher. pic.twitter.com/icxqCqvOX5
— editorji (@editorji) October 29, 2021
ಈ ಶಿಕ್ಷೆಯ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಶಿಕ್ಷಕನ ನಡೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಫೋಟೋ ವೈರಲ್ ಆಗಿದ್ದೇ ತಡ, ಪ್ರಕರಣ ದಾಖಲಿಸಿದ ಪೊಲೀಸರು ಆ ಶಿಕ್ಷಕರನ್ನು ಬಂಧಿಸಿದ್ದಾರೆ.