ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಮತ್ತೊಮ್ಮೆ ಬದಲಾವಣೆಯ ಗಾಳಿ ಬೀಸಿದೆ. ವಿಧಾನಸಭಾ ಚಿಲುನಾವಣೆಯಲ್ಲಿ ದ್ರಾವಿಡ ನೆಲದ ಜನರು ಡಿಎಂಕೆಗೆ ಆಶೀರ್ವಾದ ಮಾಡಿದ್ದು, ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲು ಸಜ್ಜಾಗುತ್ತಿದೆ.
ಮತ ಎಣಿಕೆ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಡಿಎಂಕೆ 294 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ ಕ್ರಮಿಸುವಲ್ಲಿ ಯಶಸ್ವಿಯಾಗಿದೆ.
ಈವರೆಗೂ ಅಧಿಕಾರದಲ್ಲಿದ್ದ ಅಣ್ಣಾಡಿಎಂಕೆ ಈ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅಖಾಡದಲ್ಲಿ ಗಮನಸೆಳೆದಿತ್ತು. ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ, ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಸಹಿತ ದಿಗ್ಗಜರನೇಕರು ಬಿಜೆಪಿ ಚಿಹ್ನೆಯಲ್ಲಿ ಸ್ಪರ್ದಿಸಿದ್ದರು. ಆದರೆ ಮತದಾರರು ಡಿಎಂಕೆಗೆ ಆಶೀರ್ವಾದ ಮಾಡಿದ್ದಾರೆ.
ಬಲಾಬಲ ಹೀಗಿದೆ..
- ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು ಸ್ಥಾನಗಳು : 234
- ಡಿಎಂಕೆ+ : 155
- ಎಐಎಡಿಎಂಕೆ+: 78
- ಎಂಎನ್‌ಎಂ : 1
- ಇತರರು: 0